ಕುಶಾಲನಗರ ನ ೧೯: ಸಿ.ಎನ್.ಸಿ ಸಂಘಟನೆ ವತಿಯಿಂದ ಸಾರ್ವತ್ರಿಕ ಪುತ್ತರಿ ಆಚರಣೆಯನ್ನು ಶುಕ್ರವಾರ ಚಿಕ್ಕಬೆಟ್ಟಗೇರಿಯ ನಂದಿನೆರವAಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕದಿರು ತೆಗೆಯುವ ಶಾಸ್ತç ನಡೆಸುವ ಮೂಲಕ ಆಚರಿಸಲಾಯಿತು.

ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಮುಂದಾಳತ್ವದಲ್ಲಿ ನಡೆದ ಕಾರ್ಯದಲ್ಲಿ ನೆಲ್ಲಕ್ಕಿಯ ಅಡಿಯಲ್ಲಿ ಗುರುಕಾರೋಣರು ಮತ್ತು ದೇವಾನುದೇವತೆಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ ೫ ಬಗೆಯ ಸೊಪ್ಪುಗಳಾದ ಅರಳಿ, ಮಾವು ಹಲಸು ಕುಂಬಳಿ ಮತ್ತು ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿವಿಧಾನಗಳನ್ನು ಮುಗಿಸಿ, ಕುತ್ತಿ, ತೋಕ್-ಕತ್ತಿ, ದುಡಿಕೊಟ್ಟ್ಪಾಟ್, ತಳಿಯಕ್ಕಿಯಾಗಿ ಮೆರವಣಿಗೆ ಹೊರಟು ಭತ್ತದ ಗದ್ದೆಯಲ್ಲಿ ಕದಿರು ತೆಗೆದು ಹಿಂತಿರುಗಿ ಬಂದು ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಾಲಗತಾಟ್, ಪರಿಯಕಳಿ ಮತ್ತು ಬೊಳಕಾಟ್ ನಡೆಸಿ ತದನಂತರ ಗುರುಕಾರೋಣ- ದೇವಾನುದೇವತೆಗಳಿಗೆ ನೈವೇದ್ಯ ಅರ್ಪಿಸಿ ಕೊಡವ ಸಾಂಪ್ರದಾಯಿಕ ಭೋಜನ ಸ್ವೀಕರಿಸಿ ಶ್ರದ್ಧಾ ಭಕ್ತಿ ಸಂಭ್ರಮದಿAದ ಪುತ್ತರಿಯನ್ನು ಆಚರಿಸಲಾಯಿತು. ಪುತ್ತರಿ ಹಬ್ಬಕ್ಕೆ ರಾಷ್ಟಿçÃಯ ರಜಾದಿನವನ್ನಾಗಿ ಘೋಷಿಸುವಂತೆ ಈ ಸಂದರ್ಭ ಹಕ್ಕೋತ್ತಾಯ ಮಂಡಿಸಲಾಯಿತು.

ಪುತ್ತರಿ ನಮ್ಮೆಯಲ್ಲಿ ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಮಣವಟ್ಟಿರ ಜಗದೀಶ್, ಕಾಟುಮಣಿಯಂಡ ಉಮೇಶ್, ಲೆ. ಕರ್ನಲ್ ಪಾರ್ವತಿ, ಚಂಬAಡ ಜನತ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಕಾಂಡೇರ ಸುರೇಶ್, ಅಪ್ಪೆಯಂಗಡ ಮಾಲೆ ಪೂಣಚ್ಚ, ಕಿರಿಯಮಾಡ ಶರೀನ್, ನಂದಿನೆರವAಡ ಉತ್ತಪ್ಪ, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ಅಪ್ಪಣ್ಣ, ನಂದಿನೆರವAಡ ಸೋನಿ ಅಪ್ಪಣ್ಣ, ನಂದಿನೆರವAಡ ಬೀನಾ ಅಯ್ಯಣ್ಣ, ನಂದಿನೆರವAಡ ನಿಶಾ, ನಂದಿನೆರವAಡ ಬೋಪಣ್ಣ, ಹಂಚೆಟ್ಟಿರ ಪೊನ್ನಪ್ಪ, ಹಂಚೆಟ್ಟಿರ ಶಾಂತಿ ಪೊನ್ನಪ್ಪ, ಹಂಚೆಟ್ಟಿರ ನಿತಿನ್, ಪುಟ್ಟಿಚಂಡ ಡಾನ್ ದೇವಯ್ಯ, ಚಂಡೀರ ರಾಜಾ ತಿಮ್ಮಯ್ಯ, ಚೆನ್ನಪಂಡ ದೊರೆಮಣಿ ಪೊನ್ನಪ್ಪ, ಪೊನ್ನೇಟಿ ಗಣೇಶ್, ಮಣವಟ್ಟಿರ ಮುತ್ತಕ್ಕಿ, ನಂದಿನೆರವAಡ ಕೀರ್ತನ್, ನಂದಿನೆರವAಡ ರೂಪ, ಚಂದಪAಡ ತಶ್ಮಿಕ, ಪಾಪು, ಸುನೀತ, ನಂದಿನೆರವAಡ ಪಳಂಗಪ್ಪ, ಮಣುವಟ್ಟಿರ ವಾಣಿ, ಅಮೃತ ಮುಂತಾದವರು ಇದ್ದರು.