ಮಡಿಕೇರಿ, ನ. ೧೯: ಕೊಡವ ಬುಡಕಟ್ಟು ಜನಾಂಗಕ್ಕೆ ಎಸ್‌ಟಿ ಟ್ಯಾಗ್ ಮತ್ತು ಕೊಡವ ಲ್ಯಾಂಡ್ ಸ್ವಾಯತ್ತತೆ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವ ಜನಜಾಗೃತಿ ಸಭೆ ಉಮ್ಮತ್‌ನಾಡಿನ ಕಾವಾಡಿಯಲ್ಲಿ ನಡೆಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡವರಿಗೆ ಕೊಡವ ಲ್ಯಾಂಡ್ ಮತ್ತು ಎಸ್‌ಟಿ ಟ್ಯಾಗ್‌ನ ಅನಿವಾ ರ್ಯತೆಯ ಬಗ್ಗೆ ವಿವರಿಸಲಾಯಿತು. ಸಂವಿಧಾನದ ೩೭೧ನೇ ವಿಧಿಯಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು, ಆರ್ಟಿಕಲ್ ೨೫ ಮತ್ತು ೨೬ ರಡಿಯಲ್ಲಿ ಕೊಡವ ಸಂಸ್ಕೃತಿಯ ಭಾಗವಾಗಿರುವ ಕೋವಿಗೆ ಸಂವಿಧಾನದ ರಕ್ಷಣೆ ನೀಡಬೇಕು, ೮ನೇ ಶೆಡ್ಯೂಲ್‌ನಲ್ಲಿ ಕೊಡವ ಭಾಷೆಯನ್ನು ಸೇರಿಸಬೇಕು, ಕೊಡವ ಜಾನಪದ ಸಾಂಸ್ಕೃತಿಕ ಪರಂಪರೆ ಯನ್ನು ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಗುರುತಿಸ ಬೇಕು, ಕೊಡವ ನರ ಮೇದದ ಗುರುತಾಗಿ ಅಂರ‍್ರಾಷ್ಟಿçÃಯ ಸ್ಮಾರಕ ಸ್ಥಾಪನೆ ಮಾಡಬೇಕು ಎಂದು ಎನ್.ಯು. ನಾಚಪ್ಪ ಒತ್ತಾಯಿ ಸಿದರು. ಪ್ರಮುಖರಾದ ಬಿ.ಎಂ. ಪಾರ್ವತಿ, ಚಂಬAಡ ಜನತ್, ಬೇಪಾಡಿಯಂಡ ದಿನು, ನೆಲ್ಲಮಕ್ಕಡ ಶಂಕಿ, ನೆಲ್ಲಮಕ್ಕಡ ವಿವೇಕ್, ಎಂ.ಸಿ. ಪ್ರತಾಪ್, ಕೋಡಿಮಣಿಯಂಡ ಗಣಪತಿ, ಕೆ.ಎಂ. ಐಯಮ್ಮ, ಎಂ.ಜಿ. ಮುತ್ತಪ್ಪ, ಕುಂಜಿಯAಡ ರಂಜು, ಕುಟ್ಟಂಡ ಪೆಮ್ಮಯ್ಯ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.