ನಾಪೋಕ್ಲು, ನ. ೧೮: ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಪಂಚಾಯಿತಿ ಸಭಾಂಗಣದಲ್ಲಿ ಬಂದೂಕು ಪರವಾನಗಿ ನವೀಕರಣ ಮಾಡಿಸಿಕೊಂಡರು. ಈ ಸಂದರ್ಭ ಪೊಲೀಸ್ ಠಾಣಾಧಿಕಾರಿ ಆರ್. ಕಿರಣ್ ಮಾತನಾಡಿ, ಪ್ರತಿವರ್ಷ ಬಂದೂಕು ನವೀಕರಣ ಮಾಡಿಕೊಳ್ಳುವಂತೆ ಸಲಹೆ ಮಾಡಿದರು. ಅಸ್ಸಾಂ ಕಾರ್ಮಿಕರ ದಾಖಲಾತಿಯನ್ನು ಪಂಚಾಯಿತಿಗೆ ಹಾಗೂ ಪೊಲೀಸ್ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದರು. ಪಂಚಾಯಿತಿ ಅಧ್ಯಕ್ಷÀ ಸಂಪನ್ ಅಯ್ಯಪ್ಪ, ಪಾಂಡAಡ ನರೇಶ್, ಅಂಜಪರವAಡ ಮುತ್ತಪ್ಪ ಹಾಗೂ ಸಾರ್ವಜನಿಕರು ಇದ್ದರು.