ಕೂಡಿಗೆ, ನ. ೧೮: ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೋತ್ಸವ ಕಾರ್ಯಕ್ರಮ ನಡೆಯಿತು.

ಸ್ವಾಮಿಗೆ ವಿಶೇಷ ಅಭಿಷೇಕ ಅಲಂಕಾರ ಸೇರಿದಂತೆ ಪೂಜೆಗಳು ನಡೆದವು. ಪೂಜಾ ಕೈಂಕರ್ಯವನ್ನು ನವೀನ್ ಭಟ್ ನೆರವೇರಿಸಿದರು ಪೂಜಾ ಕಾರ್ಯದಲ್ಲಿ ಕೂಡಿಗೆ ಕೂಡುಮಂಗಳೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಭಾಗವಹಿಸಿದ್ದರು.