ಮಕೇರಿ, ನ. ೧೮: ಸಮಾಜ ಸೇವೆ ಹಾಗೂ ಸಹಬಾಳ್ವೆಗೆ ಉಡುಪಿಯ ಪೇಜಾವರ ಮಠ ಮಾದರಿಯಾಗಿದೆ. ಅದರ ಪೀಠಾಧಿಪತಿಗಳಾಗಿದ್ದ ವಿಶ್ವೇಶತೀರ್ಥರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಂಸಲೇಖ ಅವರ ಮಾತು ಸರ್ವ ಬ್ರಾಹ್ಮಣರ ಹಾಗೂ ಉಡುಪಿ ಮಠದ ಅನುಯಾಯಿಗಳ ಮನಸ್ಸನ್ನು ಅತ್ಯಂತ ಘಾಸಿಗೊಳಿಸಿದ್ದು, ಈ ರೀತಿಯ ತರ್ಕರಹಿತ ಹೇಳಿಕೆಯನ್ನು ಬ್ರಾಹ್ಮಣ ವಿಧ್ಯಾಭಿವೃದ್ಧಿ ನಿಧಿ (ರಿ) ಕೊಡಗು, ಮಡಿಕೇರಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಖಂಡಿಸಿದ್ದಾರೆ.