ಕುಶಾಲನಗರ, ನ. ೧೮: ಕುಶಾಲನಗರ ಗೌಡ ಸಮಾಜ ಹಾಗೂ ಸಮಾಜದ ಅಂಗ ಸಂಸ್ಥೆಗಳ ಸಹಯೋಗದಲ್ಲಿ ತಾ. ೨೦ ರಂದು ಹುತ್ತರಿ ಹಬ್ಬ ಆಚರಣೆ ಮಾಡಲಾಗುವುದು ಎಂದು ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಸಾಮೂಹಿಕವಾಗಿ ಹುತ್ತರಿ ಹಬ್ಬ ಆಚರಿಸಲು ತೀರ್ಮಾನಿಸ ಲಾಗಿದೆ.

ಸಮಾಜದ ಅಂಗ ಸಂಸ್ಥೆಗಳಾದ ಪದ್ಮಾವತಿ ಮಹಿಳಾ ಒಕ್ಕೂಟ, ಗೌಡ ಯುವಕ ಸಂಘ, ಸ್ವಸಹಾಯ ಸಂಘ, ಸಾಂಸ್ಕೃತಿಕ ವೇದಿಕೆ ಹಾಗೂ ಅರೆಭಾಷೆ ಯೂತ್ಸ್ ಹಾಗೂ ಸಮಾಜದ ಎಲ್ಲಾ ಗೌಡ ಸಮಾಜದ ಬಾಂಧವರೊAದಿಗೆ ಶನಿವಾರ ಸಂಜೆ ೬.೩೦ ಗಂಟೆಗೆ ಗೌಡ ಸಮಾಜ ಸಭಾಂಗಣದಲ್ಲಿ ಸೇರಿ ಲಘು ಫಲಹಾರವನ್ನು ಸ್ವೀಕರಿಸಿದ ನಂತರ ರಾತ್ರಿ ೭.೩೫ಕ್ಕೆ ನೆರೆಕಟ್ಟಿ, ಇಗ್ಗುತ್ತಪ್ಪ, ಕಾವೇರಮ್ಮ ಹಾಗೂ ಗುರು ಹಿರಿಯರಿಗೆ ಪೂಜೆ ಸಲ್ಲಿಸಲಾಗುತ್ತದೆ. ಸಮಾಜದ ಮುಖಂಡ ಕಾಶಿಪೂವಯ್ಯ ಅವರು ಕದಿರು ಗುತ್ತಿಯನ್ನು ಹೊತ್ತು ಮೆರವಣಿಗೆ ಮೂಲಕ ಕಾರ್ಯಪ್ಪ ವೃತ್ತದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘದ ಗದ್ದೆಯಲ್ಲಿ ಅವರು ಪೂಜೆ ಸಲ್ಲಿಸಲಾಗುವುದು. ನಂತರ ಕದಿರು ತೆಗೆಯಲು ಚಾಲನೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಕದಿರು ವಿತರಣೆ ಮಾಡಲಾಗುವುದು ಎಂದು ಪ್ರಕಾಶ್ ತಿಳಿಸಿದರು.

ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ಪ್ರತಿ ವರ್ಷದಂತೆ ಯಾವುದೇ ಜಾತಿ ಬೇಧವಿಲ್ಲದೆ ಸಾಮೂಹಿಕವಾಗಿ ಹುತ್ತರಿ ಹಬ್ಬ ಆಚರಿಸಿ ಎಲ್ಲರಿಗೂ ಕದಿರು (ಧಾನ್ಯಲಕ್ಷ್ನಿ)ಯನ್ನು ವಿತರಿಸಲಾಗುತ್ತದೆ. ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸಿ ಹಬ್ಬ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷೆ ಪಟ್ಟಂದಿ ಬೀನಾ ಸೀತಾರಾಮ್, ಕಾರ್ಯದರ್ಶಿ ಎಂ.ಕೆ. ಗಣೇಶ್, ಸಹ ಕಾರ್ಯದರ್ಶಿ ಎಸ್. ಗಣಪತಿ, ಖಜಾಂಚಿ ಕಡ್ಯದ ಅಶೋಕ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಸ್.ಎಸ್. ಗೋಪಾಲ್, ಯುವಕ ಸಂಘದ ತುಂತಜೆ ದಯಾನ್ ಹಾಗೂ ಅಚ್ಚಾಂಡಿರ ಲತಾ ಉಪಸ್ಥಿತರಿದ್ದರು.