ಕುಶಾಲನಗರ, ನ. ೧೬: ಸಮಾಜದಲ್ಲಿ ಬೇರೂರಿರುವ ಕಂದಾಚಾರ, ಮೌಢ್ಯ ತೊಡೆಯುವ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ವಿಜ್ಞಾನದ ಪಾತ್ರ ಬಹಳ ಪ್ರಮುಖವಾದುದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎ.ಎನ್.ಮಹೇಶ್ ಹೇಳಿದರು.
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನ ಸಂಸ್ಥೆಯಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಕುಶಾಲನಗರ ಅನುಗ್ರಹ ಪದವಿಪೂರ್ವ ಕಾಲೇಜಿನಲ್ಲಿ ನಾಡಿನ ವಿಚಾರವಾದಿ ಡಾ. ಹೆಚ್. ನರಸಿಂಹಯ್ಯ ಅವರ ಜನ್ಮದಿನ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ೪೧ನೇ ಸಂಸ್ಥಾಪನಾ ದಿನದ ಅಂಗವಾಗಿ ‘ಸಮಾಜ ಮತ್ತು ವೈಚಾರಿಕತೆ' ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ವಿಚಾರವಾದಿ ಡಾ ಹೆಚ್. ನರಸಿಂಹಯ್ಯ ಜಿ.ಆರ್. ಲಕ್ಷö್ಮಣರಾವ್, ಎಂ.ಎ. ಸೇತುರಾವ್ ಹಾಗೂ ಅಡ್ಯನಡ್ಕ ಕೃಷ್ಣಭಟ್ ಮತ್ತಿತರ ವೈಚಾರಿಕತೆ ಹೊಂದಿದ್ದ ಸಮಾನ ಮನಸ್ಕರು ಸೇರಿ ಹುಟ್ಟುಹಾಕಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಂಸ್ಥೆಯು ೧೯೮೦ರಲ್ಲಿ ಪ್ರಾರಂಭ ಗೊಂಡು ಈ ತನಕ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದೆ. ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಮೂಲಕ ದೇಶದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು. ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಕೊಡಗಿನಲ್ಲಿ ವಿಜ್ಞಾನ ಚಟುವಟಿಕೆ ಗಳನ್ನು ಉತ್ತಮವಾಗಿ ಸಂಘಟಿಸ ಲಾಗುತ್ತಿದೆ ಎಂದು ಮಹೇಶ್ ಹೇಳಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಮೂರ್ತಿ ರಾಜೇ ಅರಸ್ ಮಾತನಾಡಿ, ಕೊಡಗಿನಲ್ಲಿ ವಿಜ್ಞಾನ ಪರಿಷತ್ತು ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ಪರಿಸರ ಸ್ನೇಹಿ ಗಣೇಶೋತ್ಸವ ಹಾಗೂ ಹಸಿರು ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳು ಹಾಗೂ ಸಮುದಾ ಯದಲ್ಲಿ ಪರಿಸರ ಜಾಗೃತಿ ಮೂಡಿ ಸುತ್ತಿರುವುದು ರಾಜ್ಯಕ್ಕೆ ಮಾದರಿ ಯಾಗಿದೆ ಎಂದು ಶ್ಲಾಘಿಸಿದರು. ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷ ಟಿ.ಜಿ. ಪ್ರೇಮ್ ಕುಮಾರ್ ಮಾತನಾಡಿ, ವಿಜ್ಞಾನ ಪರಿಷತ್ತಿನಿಂದ ಜಿಲ್ಲೆಯಲ್ಲಿ ವಿಜ್ಞಾನದ ಹತ್ತು ಹಲವು ಕಾರ್ಯ ಕ್ರಮಗಳೊಂದಿಗೆ ಹಸರೀಕರಣ ಹಾಗೂ ವಿವಿಧ ಪರಿಸರ ಸ್ನೇಹಿ ಚಟು ವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ವಿಜ್ಞಾನ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಫಿಲಿಪ್ ವಾಸ್ ಮಾತನಾಡಿ, ಪರಿಷತ್ತಿನ ಜಿಲ್ಲಾ ನೂತನ ಸಮಿತಿಯ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮತ್ತು ತಂಡವು ಜಿಲ್ಲೆಯಲ್ಲಿ ಮತ್ತಷ್ಟು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಪ್ರೇರಣೆ ನೀಡಲಿದೆ ಎಂದರು. ವಿಜ್ಞಾನ ಪರಿಷತ್‌ನ ಜಿಲ್ಲಾ ನೂತನ ಸಮಿತಿಯ ಉಪಾಧ್ಯಕ್ಷರಾದ ಎಂ.ಇ. ಮೊಯಿದ್ದೀನ್, ಕೆ.ಟಿ. ಬೇಬಿ ಮ್ಯಾಥ್ಯೂ, ಕಾರ್ಯದರ್ಶಿ ಡಿ. ಕೃಷ್ಣಚೈತನ್ಯ, ಸಹ ಕಾರ್ಯದರ್ಶಿ ಎನ್.ಕೆ. ಮಾಲಾದೇವಿ, ಖಜಾಂಚಿ ಜಿ. ಶ್ರೀಹರ್ಷ ಮಾತನಾಡಿದರು.
ವಿಜ್ಞಾನ ಪರಿಷತ್‌ನ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಡಾ. ಜೆ. ಸೋಮಣ್ಣ, ಉಪಾಧ್ಯಕ್ಷರಾದ ಎಂ.ಎನ್. ವೆಂಕಟನಾಯಕ್, ಡಿ.ಎಂ. ರೇವತಿ, ಮಾಜಿ ಖಜಾಂಚಿ ಹೆಚ್.ಎಸ್. ಗುರುಸ್ವಾಮಿ, ಜಿಲ್ಲಾ ಸಮಿತಿಯ ಸದಸ್ಯರಾದ ಕೆ.ಎಸ್. ರತೀಶ್, ಡೆನಿಸ್ ಡಿಸೋಜ, ಕೆ.ಎಸ್. ಅಶ್ವಿನಿ, ಪ್ರಮುಖರಾದ ಜಿ.ಶ್ರೀನಾಥ್, ಟಿ.ಬಿ. ಜಗದೀಶ್, ಹೆಚ್.ಬಿ. ಚಂದ್ರಪ್ಪ, ಟಿ.ಎಸ್. ಶಾಂಭಶಿವ ಮೂರ್ತಿ, ಟಿ.ವಿ. ಶೈಲಾ, ಹೆಚ್.ಸಿ. ಯಶೋದ ಇದ್ದರು.