ಮಡಿಕೇರಿ, ನ. ೧೬: ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ಭಾವನೆ ಗಳಿಗೆ ಗೌರವ ನೀಡಿ ಜನಪರವಾಗಿ ಉದ್ದೇಶಿತ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಸತೀಶ ಅವರು ಭರವಸೆ ನೀಡಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆ.ಪಿ.ಟಿ.ಸಿ.ಎಲ್) ವತಿಯಿಂದ ಮಡಿಕೇರಿ-ವೀರಾಜಪೇಟೆ ತನಕ ಉದ್ದೇಶಿಸಿರುವ ೬೬ ಕೆ.ವಿ. ವಿದ್ಯುತ್ ಮಾರ್ಗದ ಕಾಮಗಾರಿ ಸಂಬAಧ ಭೂ ಪರಿಹಾರ ಹಾಗೂ ಬೆಲೆ ನಿಗದೀಕರಣ ಸಭೆ ನಡೆಯಿತು.

ಈ ಯೋಜನೆಗಾಗಿ ಸಮಿತಿ ಯೊಂದು ರಚನೆಯಾಗಿದ್ದು, ತಜ್ಞರ ಸಲಹೆಯಂತೆ ಪರಿಹಾರ ನಿಗದಿಪಡಿ ಸಲಾಗುವುದು. ಜಿಲ್ಲೆಯ ಕಂದಾಯ ಇಲಾಖೆಗೆ ಸಂಬAಧಿಸಿ ದಂತೆ ಆನೇಕ ಸಮಸ್ಯೆಗಳಿವೆ. ಇದನ್ನು ಪರಿಹರಿಸ ಲಾಗುವುದು. ಸುಸ್ತಿರ ಅಭಿವೃದ್ಧಿಗೆ ನಾವುಗಳು ಒತ್ತು ನೀಡುತ್ತೇವೆ. ಪರಿಸರ ನಾಶ ಕಡಿಮೆ ಮಾಡಿ ಯೋಜನೆ ಯನ್ನು ಅನುಷ್ಠಾನ ಮಾಡಲಾಗುವುದು. ಸಮೀಕ್ಷೆ ನಡೆಸಿ ಇದರ ಪರಿಣಾಮ ವನ್ನು ತಿಳಿದುಕೊಳ್ಳ ಲಾಗುತ್ತದೆ. ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲಾಗುವುದು. ಗ್ರಾಮ ಮಟ್ಟದಲ್ಲಿ ವೈಯಕ್ತಿಕವಾಗಿ ನೋಟೀಸ್ ನೀಡಿ ಬಳಿಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಜನರ ಮನವೊಲಿಸುವ ಪ್ರಯತ್ನ ಮಾಡಲಾಗುವುದು.

(ಮೊದಲ ಪುಟದಿಂದ) ಯೋಜನೆಯಿಂದ ಬೆಳೆ ನಷ್ಟಗೊಂಡಲ್ಲಿ ಅದಕ್ಕೂ ಪರಿಹಾರ ನೀಡಲಾಗುವುದು ಎಂದರು. ತಾನು ರೈತ ಕುಟುಂಬದಿAದ ಬಂದಿದ್ದು, ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ; ಈ ಯೋಜನೆಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೆ.ಪಿ.ಟಿ.ಸಿ.ಎಲ್ ಅಧೀಕ್ಷಕ ಅಭಿಯಂತರ ಗೋಪಾಲಕೃಷ್ಣ ಗಾಂವ್ಕರ್ ಮಾತನಾಡಿ, ನಿರಂತರವಾಗಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ವ್ಯಾಪ್ತಿಯಲ್ಲಿ ೧೩೫ ಗೋಪುರ ನಿರ್ಮಾಣವಾಗುತ್ತದೆ. ಕಾನೂನಿನಡಿ ಪರಿಹಾರ ನೀಡಲು ಕ್ರಮವಹಿಸಲಾಗುವುದು. ಜಾಗದ ಮೌಲ್ಯದ ಶೇ ೮೫ ರಷ್ಟು ಪರಿಹಾರ ನೀಡುವ ಪ್ರಸ್ತಾವನೆ ಇದೆ. ಇದನ್ನು ಹೆಚ್ಚಳ ಮಾಡಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಭೂಮಿಯ ಮಾಲೀಕತ್ವವನ್ನು ಪಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮರಗಳು ಕಡಿಯಬೇಕಾದಲ್ಲಿ ಅದಕ್ಕೂ ಪರಿಹಾರ ನೀಡಲಾಗುವುದು. ಈ ಯೋಜನೆಯಿಂದ ಜನರಿಗೆ ಅನುಕೂಲವಾಗುತ್ತದೆ. ಸಂಪೂರ್ಣ ಯೋಜನೆ ವರದಿ ತಯಾರಿಸಿ ನೀಡಲಾಗುವುದು ಎಂದರು.

ಮೇಕೇರಿಯ ಹಿತೇಶ್ ಮಾತನಾಡಿ, ಕ್ರಮಬದ್ಧವಾದ ನೀಲಿನಕ್ಷೆ ತಯಾರು ಮಾಡಿ ಜನರಿಗೆ ನೀಡಬೇಕು. ಜಾಗದ ಮಾಲೀಕರಿಗೆ ವಿಮೆ ಮಾಡಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಗೋಪಾಲಕೃಷ್ಣ, ೬೬ ಕೆ.ವಿ.ಯಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಸಂಭವಿಸುವುದಿಲ್ಲ. ಹಾಗಾಗಿ ವಿಮೆ ನೀಡಲಾಗುವುದಿಲ್ಲ ಹಾಗೂ ಜೀವ ವೈವಿಧ್ಯಕ್ಕೂ ಧಕ್ಕೆ ಆಗುವುದಿಲ್ಲ ಎಂದು ವಿವರಿಸಿದರು.

ಮೇಕೇರಿಯ ಸೀಮಾ ಮಾತನಾಡಿ, ಮನೆಯ ಮೇಲೆ ಲೈನ್ ಹೋಗುವದರಿಂದ ಆತಂಕ ಎದುರಾಗಿದೆ. ಪರ್ಯಾಯ ಸ್ಥಳ ಗುರುತಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ಅದಷ್ಟೂ ಮನೆ ಮೇಲಿನಿಂದ ವಿದ್ಯುತ್ ಮಾರ್ಗ ಹೋಗುವುದನ್ನು ತಡೆಯಲಾಗುವುದು. ಅನಿವಾರ್ಯವಾದಲ್ಲಿ ಏನು ಮಾಡಲಾಗುವುದಿಲ್ಲ ಎಂದರು.

ಕಡಗದಾಳುವಿನ ಮಾದೇಟೀರ ತಿಮ್ಮಯ್ಯ ಮಾತನಾಡಿ, ಜನರಿಗೆ ಮಾಹಿತಿ ನೀಡದೆ, ಗ್ರಾಮ ಮಟ್ಟದಲ್ಲಿ ಸಭೆ ನಡೆಸದೆ ಏಕಾಏಕಿ ಬೆಲೆ ನಿಗದಿ ಸಭೆ ಕರೆದಿರುವುದು ಸರಿಯಲ್ಲ. ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಗ್ರಾ.ಪಂ.ನ ಅನುಮತಿ ಬೇಕು ಆದರೆ, ಗ್ರಾ.ಪಂ. ಗಮನಕ್ಕೆ ತಾರದೆ ಸಭೆ ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಎಂ.ಬಾಡಗದ ಗೌತಮ್ ಮಾತನಾಡಿ, ವಸ್ತುಗಳ ಸರಬರಾಜು ಸಂದರ್ಭ ರಸ್ತೆ, ತೋಟ ಹಾಳಾಗುತ್ತದೆ. ಇದಕ್ಕೆ ಪರಿಹಾರವೇನೂ.? ಎಂದು ಪ್ರಶ್ನಿಸಿದರು. ಬಿಳಿಗೇರಿಯ ಉಮೇಶ್ ಕೊಡಗು ಜಿಲ್ಲೆಯ ಬಹುತೇಕ ಕೃಷಿಭೂಮಿಗಳು ಮಾಲೀಕತ್ವ ಜಂಟಿ ಖಾತೆಯಲ್ಲಿದೆ. ಪರಿಹಾರ ನೀಡಬೇಕಾದಲ್ಲಿ ಯಾರಿಗೆಂದು ನೀಡಲಾಗುತ್ತದೆ ಎಂದು ವಿವರ ಬಯಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ, ಎಲ್ಲರೂ ಒಪ್ಪುವ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಜಂಟಿ ಖಾತೆ ಬದಲಾವಣೆಗೂ ಕಾಲಮಿತಿಯೊಳಗೆ ಕ್ರಮವಹಿಸಲಾಗುವುದು. ತೋಟ ಹಾಳಾದಲ್ಲಿ ಅಂತಹ ಪ್ರಕರಣಗಳಿಗೆ ಪರಿಹಾರ ನೀಡಲಾಗುವುದು ಎಂದರು.

ಈ ಸಂದರ್ಭ ಮಡಿಕೇರಿ ತಹಶೀಲ್ದಾರ್ ಮಹೇಶ್, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ವಿದ್ಯುತ್ ಪರಿವೀಕ್ಷಕ ಅಮಿತ್, ಕಾರ್ಯಪಾಲಕ ಅಭಿಯಂತರುಗಳಾದ ಅಶೋಕ್, ಮಾದೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ವಿವಿಧ ಭಾಗಗಳ ರೈತರು ಉಪಸ್ಥಿತರಿದ್ದರು.