ಮಡಿಕೇರಿ, ನ. ೧೬: ಕೊಡಗು ಗೌಡ ನಿವೃತ್ತ ಸಂಘದ ನೇತೃತ್ವದಲ್ಲಿ ರೋಟರಿ ಮಿಸ್ಟಿಹಿಲ್ಸ್, ವಿನೋದ್ ಮೆಡಿಕಲ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಕತ್ತೂರು ಇವರ ಸಹಕಾರದಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ನಗರಸಭೆ ಹಾಗೂ ರೋಟರಿ ಮಿಸ್ಟಿಹಿಲ್ಸ್ನ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಎಲ್ಲರೂ ನೇತ್ರ ತಪಾಸಣೆಯನ್ನು ಮಾಡಿಸಿ ಆರೋಗ್ಯವನ್ನು ಕಾಪಾಡಿಕೊಂಡು ಬರುವುದಲ್ಲದೆ, ಕಣ್ಣಿನ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.

ಮಾಜಿ ರೋಟರಿ ಮಿಸ್ಟಿಹಿಲ್ಸ್ನ ಅಧ್ಯಕ್ಷ ದೇವಣಿರ ತಿಲಕ್ ಮಾತನಾಡಿ, ಕಣ್ಣು ಮನುಷ್ಯನ ದೇಹದ ಒಂದು ಪ್ರಮುಖ ಅಂಗ. ಇದರ ಆರೋಗ್ಯಕ್ಕೆ ಹೆಚ್ಚು ಗಮನ ಕೊಟ್ಟು ದೃಷ್ಟಿ ಕಾಪಾಡಿಕೊಂಡು ಬರಬೇಕೆಂದು ತಿಳಿಸಿದರು.

ನೇತ್ರ ತಜ್ಞ ಡಾ. ಪ್ರಶಾಂತ್ ಸುಮಾರು ೧೮೦ ಮಂದಿಯ ನೇತ್ರ ತಪಾಸಣೆಯನ್ನು ಮಾಡಿದರು. ಇವರಲ್ಲಿ ೧೦೫ ಮಂದಿಗೆ ಉಚಿತ ಕನ್ನಡಕ ಸಿಫಾರಸ್ಸು ಮಾಡಿ, ತಾ. ೩೦ ರಂದು ಉಚಿತ ಕನ್ನಡಕವನ್ನು ಕೊಡುವುದಾಗಿ ಕೊಡಗು ಗೌಡ ನಿವೃತ್ತ ಸಂಘದಿAದ ತಿಳಿಸಲಾಯಿತು. ೯೫ ಮಂದಿಗೆ ಉಚಿತ ಔಷಧಿಯನ್ನು ನೀಡಲಾಯಿತು. ಕಣ್ಣು ದೃಷ್ಟಿ ವರದಿಗಾರ ರವಿ ಹಲವು ಮಂದಿಯ ದೃಷ್ಟಿ ಪರೀಕ್ಷಿಸಿ ೧೬ ಜನರಿಗೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಮೂರ್ನಾಡಿಗೆ ಉಚಿತ ಕಣ್ಣು ಪೊರೆ ತೆಗೆಸಲು ಶಿಫಾರಸ್ಸು ಮಾಡಿ ದಿನಾಂಕವನ್ನು ತಿಳಿಸಿ ಅಲ್ಲಿಗೆ ತೆರಳುವಂತೆ ತಿಳಿಸಿದರು.ಮಿಸ್ಟಿಹಿಲ್ಸ್ನ ಮಾಜಿ ರೋಟರಿ ಅಧ್ಯಕ್ಷರುಗಳಾದ ಅಂಬೆಕಲ್ಲು ವಿನೋದ್, ಕಟ್ರತನ ಸಂದೀಪ್, ಬೆಳೆಗಾರರಾದ ಮಂದ್ರಿರ ನಾಣಯ್ಯ, ಅಮ್ಮಾಟಂಡ ಸೋಮಣ್ಣ, ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಉಳುವಾರನ ಪಳಂಗಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಕೊಡಗು ಗೌಡ ನಿವೃತ್ತ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ಜಂಟಿ ಕಾರ್ಯದರ್ಶಿ ಕುದುಪಜೆ ಶಾರದ, ಖಜಾಂಚಿ ಪೊನ್ನಚನ ಸೋಮಣ್ಣ, ನಿರ್ದೇಶಕರುಗಳಾದ ಪಟ್ಟಡ ದೇವಯ್ಯ, ಕುಮಾರಿ ಸೂದನ ಮೋಹಿನಿ, ತಳೂರು ಕಾಳಪ್ಪ, ಕುಯ್ಯಮುಡಿ ವಸಂತ, ಹೊಸೊಕ್ಲು ಪೊನ್ನಪ್ಪ, ಕರ್ಣಯ್ಯನ ನಾಗೇಶ್, ಕೂಡಕಂಡಿ ಉಮಾದೇವಿ, ಗ್ರಾಮಸ್ಥರುಗಳಾದ ದಂಬೆಕೋಡಿ ಸುಭಾಶ್, ದಂಬೆಕೋಡಿ ಕಾರ್ಯಪ್ಪ, ಗೌಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ತುಂತಜೆ ದಯಾನಂದ ಇವರುಗಳು ಸಹಕರಿಸಿದರು.