ಮಡಿಕೇರಿ, ನ.೧೫ : ಗಣ ರಾಜ್ಯೋತ್ಸವ ಅಂಗವಾಗಿ ‘ದೇಶಭಕ್ತಿ ಮತ್ತು ರಾಷ್ಟç ನಿರ್ಮಾಣದಲ್ಲಿ ಯುವ ಜನರು’ ಎಂಬ ಶೀರ್ಷಿಕೆಯಲ್ಲಿ ಸಬ್ಕಾ ಸಾತ್ ಸಬ್ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಸಬ್ಕಾ ಪ್ರಯಾಸ್’ ಕುರಿತ ಭಾಷಣ ಸ್ಪರ್ಧೆಯನ್ನು ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಆಯೋಜಿಸಿದ್ದು, ಸೋಮವಾರಪೇಟೆ ಮತ್ತು ಕಾವೇರಿ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯು ತಾ. ೧೭ರಂದು ಬೆಳಗ್ಗೆ ೧೧ ಗಂಟೆಗೆ ಶನಿವಾರಸಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ರಾಜ್ಯ ಮತ್ತು ರಾಷ್ಟç ಮಟ್ಟದ ವಿಜೇತರುಗಳಿಗೆ ಆಕರ್ಷಕ ಬಹುಮಾನ ನೀಡಲಿದ್ದು, ಜಿಲ್ಲಾ ಮಟ್ಟ ಪ್ರಥಮ ರೂ.೫ ಸಾವಿರ, ದ್ವಿತೀಯ ರೂ.೨ ಸಾವಿರ ಮತ್ತು ತೃತೀಯ ರೂ. ೧ ಸಾವಿರ, ರಾಜ್ಯ ಮಟ್ಟದಲ್ಲಿ ಪ್ರಥಮ ರೂ. ೨೫ ಸಾವಿರ, ದ್ವಿತೀಯ ರೂ.೧೦ ಸಾವಿರ ಮತ್ತು ತೃತೀಯ ರೂ.೫ ಸಾವಿರ ಹಗೂ ರಾಷ್ಟç ಮಟ್ಟದಲ್ಲಿ ಪ್ರಥಮ ರೂ.೨ ಲಕ್ಷ, ದ್ವಿತೀಯ ರೂ.೧ ಲಕ್ಷ ಮತ್ತು ತೃತೀಯ ರೂ.೫೦ ಸಾವಿರ ಬಹುಮಾನ ನೀಡಲಾಗುತ್ತದೆ.
ಆಯ್ಕೆಗೊಂಡ ಪ್ರತಿ ಮೂರು ಯುವ ಜನರು ಜಿಲ್ಲಾ ಮಟ್ಟದಲ್ಲಿ ಜರುಗುವ ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಯ್ಕೆಯಾದ ವರು, ರಾಜ್ಯ ಮಟ್ಟದ ಸ್ಪರ್ಧೆಗೆ ಭಾಗವಹಿಸಬಹುದಾಗಿದೆ. ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಆಯ್ಕೆಯಾದ ವರು ರಾಷ್ಟç ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ಆಯಾಯ ತಾಲ್ಲೂಕಿನ ಆಸಕ್ತ ೧೮-೨೯ ವಯೋಮಿತಿಯ ಯುವ ಜನರು, ಸ್ಪರ್ಧಿಗಳು ಕಡ್ಡಾಯವಾಗಿ ಕೊಡಗು ಜಿಲ್ಲೆಯ ನಿವಾಸಿಗಳಾಗಿರ ಬೇಕು. ಅಥವಾ ಕಳೆದ ೫ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ವಾಸವಿರಬೇಕು. ೨೦೧೬ ರಿಂದ ೨೦೧೯ ರ ತನಕ ಜಿಲ್ಲಾ ಮಟ್ಟದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡವರು ಈ ಬಾರಿ ಸ್ಪರ್ಧಿಸುವಂತಿಲ್ಲ.
ಹೆಚ್ಚಿನ ಮಾಹಿತಿಗೆ ನೆಹರು ಯುವ ಕೇಂದ್ರದ ರಾಷ್ಟಿçÃಯ ಕಾರ್ಯಕರ್ತರಾದ ರಂಜಿತ ದೂ. ೯೭೩೧೧೦೮೧೫೪ ಹಾಗೂ ನೆಹರು ಯುವ ಕೇಂದ್ರ ಕಚೇರಿ, ಮಡಿಕೇರಿ ದೂ.ಸಂ೦೮೨೭೨-೨೨೫೪೭೦ ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಉಪ ನಿರ್ದೇಶಕರಾದ ಎಸ್.ಸಿದ್ದರಾಮಪ್ಪ ಅವರು ತಿಳಿಸಿದ್ದಾರೆ.