ಸೋಮವಾರಪೇಟೆ, ನ. ೧೬: ಬೈಕ್ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಗುಂಪೊAದು ಹಲ್ಲೆ ನಡೆಸಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಮಾದಾಪುರ ಸಮೀಪದ ಇಗ್ಗೋಡ್ಲು ನಿವಾಸಿ ರಶೀದ್ ಎಂಬವರು ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ದಾರಿ ತಡೆದ ಯುವಕರ ಗುಂಪು, ಹಳೆ ವೈಷಮ್ಯ ಹಿನ್ನೆಲೆ ಹಲ್ಲೆ ನಡೆಸಿ, ೩ ಸಾವಿರ ರೂಪಾಯಿ ಹಣವನ್ನು ಕಸಿದುಕೊಂಡಿರುವ ಬಗ್ಗೆ ಗಾಯಾಳು ಯುವಕ ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಗರಗಂದೂರು ಸಮೀಪದ ಜಾರುಕೊಲ್ಲಿ ಎಂಬಲ್ಲಿ ತೆರಳುತ್ತಿದ್ದ ಸಂದರ್ಭ ದಾರಿ ತಡೆದ ಮಾದಾಪುರದ ಸುನಿಲ್ ಸೇರಿದಂತೆ ಇತರರು, ತನ್ನ ಮೇಲೆ ಹಲ್ಲೆ ನಡೆಸಿ, ಹಣ ಕಸಿದಿದ್ದಾರೆ ಎಂದು ರಶೀದ್ ಆರೋಪಿಸಿದ್ದು, ಮಡಿಕೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ಎಂ. ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಸೇರಿದಂತೆ ಸಿಬ್ಬಂದಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.