ಸಿದ್ದಾಪುರ, ನ. ೧೬: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಸೂರುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಮರೀಚಿಕೆಯಾಗಿದೆ. ಎರಡು ವರ್ಷಗಳು ಕಳೆದರೂ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ದಟ್ಟವಾದ ಕಾಡು ಬೆಳೆದು ನಿಂತಿದೆ. ಮನೆಯನ್ನು ಕಳೆದುಕೊಂಡ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುAಡಿ ಹಾಗೂ ಬರಡಿ, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಗುಹ್ಯ ಹಾಗೂ ಕರಡಿಗೋಡು ವ್ಯಾಪ್ತಿಯ ನದಿ ದಡದ ನಿವಾಸಿಗಳು ೨೦೧೯ರ ಪ್ರವಾಹದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಬಳಿಕ ಸರ್ಕಾರ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಮಾಡಿ, ಸರ್ಕಾರದ ವತಿಯಿಂದ ನಿವೇಶನ ಹಾಗೂ ಸೂರು ನೀಡುವುದಾಗಿ ಭರವಸೆ ನೀಡಿ ಎರಡು ವರ್ಷಗಳು ಕಳೆದರೂ ಸಂತ್ರಸ್ತರಿಗೆ ಈವರೆಗೂ ಶಾಶ್ವತ ಸೂರು ಸಿಗದೇ ಅತಂತ್ರರಾಗಿದ್ದಾರೆ.
ಅರೆಕಾಡುವಿನಲ್ಲಿ ಪುನರ್ವಸತಿ: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರು ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಸುಮಾರು ೪ ತಿಂಗಳುಗಳ ಕಾಲ ಇದ್ದು, ಶಾಶ್ವತ ಪರಿಹಾರ ದೊರಕುವವರೆಗೂ ಪರಿಹಾರ ಕೇಂದ್ರದಿAದ ಕದಲುವುದಿಲ್ಲ ಎಂದು ಪಟ್ಟು ಸಿದ್ದಾಪುರ, ನ. ೧೬: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಸೂರುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಮರೀಚಿಕೆಯಾಗಿದೆ. ಎರಡು ವರ್ಷಗಳು ಕಳೆದರೂ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಸಂತ್ರಸ್ತರಿಗೆ ಗುರುತಿಸಿದ ಜಾಗದಲ್ಲಿ ದಟ್ಟವಾದ ಕಾಡು ಬೆಳೆದು ನಿಂತಿದೆ. ಮನೆಯನ್ನು ಕಳೆದುಕೊಂಡ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುAಡಿ ಹಾಗೂ ಬರಡಿ, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಗುಹ್ಯ ಹಾಗೂ ಕರಡಿಗೋಡು ವ್ಯಾಪ್ತಿಯ ನದಿ ದಡದ ನಿವಾಸಿಗಳು ೨೦೧೯ರ ಪ್ರವಾಹದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಬಳಿಕ ಸರ್ಕಾರ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಮಾಡಿ, ಸರ್ಕಾರದ ವತಿಯಿಂದ ನಿವೇಶನ ಹಾಗೂ ಸೂರು ನೀಡುವುದಾಗಿ ಭರವಸೆ ನೀಡಿ ಎರಡು ವರ್ಷಗಳು ಕಳೆದರೂ ಸಂತ್ರಸ್ತರಿಗೆ ಈವರೆಗೂ ಶಾಶ್ವತ ಸೂರು ಸಿಗದೇ ಅತಂತ್ರರಾಗಿದ್ದಾರೆ.
ಅರೆಕಾಡುವಿನಲ್ಲಿ ಪುನರ್ವಸತಿ: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರು ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಸುಮಾರು ೪ ತಿಂಗಳುಗಳ ಕಾಲ ಇದ್ದು, ಶಾಶ್ವತ ಪರಿಹಾರ ದೊರಕುವವರೆಗೂ ಪರಿಹಾರ ಕೇಂದ್ರದಿAದ ಕದಲುವುದಿಲ್ಲ ಎಂದು ಪಟ್ಟು ಸರ್ಕಾರಕ್ಕೆ ಕಳುಹಿಸಿ, ಅನುಮತಿಯನ್ನು ಪಡೆದುಕೊಂಡಿದೆ. ಆದರೆ, ಸರ್ಕಾರ ಮರಗಳನ್ನು ಕಡಿಯಲು ಅನುಮತಿ ನೀಡಿದ್ದರು, ಈವರೆಗೆ ಮರಗಳ ತೆರವು ಕಾರ್ಯ ಆರಂಭವಾಗಿಲ್ಲ. ಸಂತ್ರಸ್ತರಿಗೆ ನೀಡಬೇಕಾದ ಜಾಗದ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಸಂತ್ರಸ್ತರ ಹೋರಾಟ ಸಮಿತಿ ಮತ್ತೊಮ್ಮೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಟೋಕನ್ ಮೂಲಕ ನಿವೇಶನ ವಿತರಣೆ: ಅಂದಿನ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ಶಾಸಕ ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಸಂತ್ರಸ್ತರಿಗೆ ಜಾಗವನ್ನು ಹಸ್ತಾಂತರಿಸುವ ಸಲುವಾಗಿ ಲಾಟರಿಯ ಮೂಲಕ ಟೋಕನ್ ವಿತರಿಸಿದ್ದರು. ಸಂತ್ರಸ್ತರಿಗೆ ಮೀಸಲಿಟ್ಟ ಜಾಗದ ಮರಗಳ ತೆರವು, ಸೈಟ್ನ ಗಡಿ ಗುರುತಿಸದಿದ್ದರೂ, ಹೋರಾಟವನ್ನು ಹತ್ತಿಕ್ಕಲು ಟೋಕನ್ ವಿತರಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಟೋಕನ್ ವಿತರಿಸಿ, ವರ್ಷಗಳು ಕಳೆದರೂ, ಈವರೆಗೂ ಸಂತ್ರಸ್ತರಿಗೆ ಜಾಗ ಸಿಕ್ಕಿಲ್ಲ.
ಟೆಂಟ್ಗಳಲ್ಲಿ ದಿನ ದೂಡುವ ಸಂತ್ರಸ್ತರು : ಮನೆಗಳನ್ನು ಕಳೆದುಕೊಂಡಿ ರುವ ಸಂತ್ರಸ್ತರು ಈ ಹಿಂದೆ ತಮ್ಮ ಮನೆಗಳಿದ್ದ ಜಾಗದಲ್ಲೇ ಪ್ಲಾಸ್ಟಿಕ್ ಹೊದಿಕೆಯ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ದಿನ ದೂಡುತ್ತಿದ್ದಾರೆ. ಜಿಲ್ಲಾಡಳಿತ ಶೀಘ್ರದಲ್ಲೇ ನಿವೇಶನ ಹಾಗೂ ಶಾಶ್ವತ ಸೂರು ಕಲ್ಪಿಸುವ ನಿರೀಕ್ಷೆಯಲ್ಲಿ ಸಂತ್ರಸ್ತರಿದ್ದಾರೆ. ಸಿದ್ದಾಪುರ ವ್ಯಾಪ್ತಿಯ ನದಿ ದಡದ ನಿವಾಸಿಗಳಿಗೆ ಘಟ್ಟದಳ್ಳಿ ಸಮೀಪದ ಶ್ರೀರಂಗಪಟ್ಟಣ ಗ್ರಾಮದ ೫ ಎಕರೆ ಒತ್ತುವರಿ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ಸಂತ್ರಸ್ತರು ಒತ್ತಾಯಿಸಿದ್ದರು. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಪೈಸಾರಿ ಜಾಗವನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕೆಂದು ಹೋರಾಟ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನೂ ಸಿಗದ ಬಾಡಿಗೆ ಹಣ: ಸಂಪೂರ್ಣ ಹಾನಿಯಾದ ಕುಟುಂಬಗಳಿಗೆ ಮಾಸಿಕ ರೂ. ೫ ಸಾವಿರ ಹಣವನ್ನು ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆ ಪೈಕಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಸುಮಾರು ೩೫ಕ್ಕೂ ಅಧಿಕ ಕುಟುಂಬಗಳಿಗೆ ಈವರೆಗೂ ಬಾಡಿಗೆ ಹಣ ಬಂದಿಲ್ಲ. ಕೆಲವು ಸಂತ್ರಸ್ತರು ಬಾಡಿಗೆ ಹಣ ಸಂದಾಯವಾಗಿಲ್ಲ ಎಂದು ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಈವರೆಗೂ ಮಾಸಿಕ ಬಾಡಿಗೆ ಹಣ ಸಿಗದೆ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವಾಹದಲ್ಲಿ ಸಂತ್ರಸ್ತರು ಮತ್ತಷ್ಟು ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಕಂಡು ಬಂದಿದೆ. ತಮಗೆ ಪುನರ್ವಸತಿ ಯಾವಾಗ ಸಿಗಬಹುದೆಂದು ಸಂತ್ರಸ್ತರು ಜಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಭಿಪ್ರಾಯವನ್ನು ಸಂತ್ರಸ್ತರು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಗುರುತಿಸಿದ ಜಾಗ ಕಾಡಾಗಿದೆ: ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಹಾಗೂ ಕುಂಬಾರಗುAಡಿ ಭಾಗದ ನದಿ ತೀರದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅರೆಕಾಡು ಗ್ರಾಮದಲ್ಲಿ ಗುರುತಿಸಿದ ಪುನರ್ವಸತಿ ಜಾಗ ನಿರ್ವಹಣೆ ಇಲ್ಲದೇ ಇದೀಗ ಕಾಡಿನಂತಾಗಿದೆ. ಈ ಹಿಂದೆ ಎಂಟು ಎಕರೆ ಜಾಗದಲ್ಲಿ ಕಾಫಿ ಗಿಡಗಳನ್ನು ತೆರವುಗೊಳಿಸಲಾಗಿತ್ತು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ಜಿಲ್ಲಾಡಳಿತ ರೂಪಿಸಿತ್ತು. ಅಲ್ಲದೇ ಮರಗಳನ್ನು ಕೂಡ ತೆರವುಗೊಳಿಸಿತ್ತು. ಆದರೆ ಇದೀಗ ಪುನರ್ವಸತಿಗೆ ಸಂಬAಧಿಸಿದ ಯಾವುದೇ ಕಾಮಗಾರಿಗಳು ಮಾಡದೇ ಸಂಬAಧಪಟ್ಟ ಇಲಾಖಾಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಕೂಡಲೇ ಈ ಬಗ್ಗೆ ನೂತನ ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಇಲಾಖಾಧಿಕಾರಿಗಳು ಗಮನಹರಿಸಿ ಸರ್ಕಾರದಿಂದ ಪುನರ್ವಸತಿ ನಿರ್ಮಾಣಕ್ಕೆ ಮುಂದಾಗ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನೆಲ್ಲಿಹುದಿಕೇರಿ ಭಾಗದ ಸಂತ್ರಸ್ತರಿಗೆ ಚಾರಿಟೇಬಲ್ ಟ್ರಸ್ಟ್ಗಳು ಸರ್ಕಾರ ಮಾಡದ ಕೆಲಸವನ್ನು ಮಾಡುವ ಮೂಲಕ ಅರ್ಹ ಸಂತ್ರಸ್ತರನ್ನು ಗುರುತಿಸಿ ಮೊದಲ ಹಂತದ ಮನೆ ನಿರ್ಮಾಣ ಮಾಡಿ ಈಗಾಗಲೇ ಹಸ್ತಾಂತರ ಮಾಡಿದ್ದಾರೆ. ಮತ್ತಷ್ಟು ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವ ಯೋಜನೆಯನ್ನು ಹಾಗೂ ನಿವೇಶನವನ್ನು ಹಂಚಿಕೆ ಮಾಡುವ ಮೂಲಕ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಸಿದ್ದಾಪುರದಲ್ಲಿ ಮಸೀದಿಯ ವತಿಯಿಂದ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಸರ್ಕಾರವು ಕೂಡಲೇ ಸಂಕಷ್ಟಕ್ಕೆ ಸಿಲುಕಿಕೊಂಡು ನದಿ ತೀರದಲ್ಲಿ ದಿನದೂಡುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ಮುಂದಾಗಬೇಕೆAದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ವಾಸು ಎ. ಎನ್., ಸಿದ್ದಾಪುರ