ಕೂಡಿಗೆ, ನ. ೧೪: ಇಲ್ಲಿಗೆ ಸಮೀಪದ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಎಂಬಿಟೆಲ್ ಟೆಕ್ನಾಲಜಿಸ್ ಇಂಡಿಯಾ ವತಿಯಿಂದ ರೂ. ೫ ಲಕ್ಷ ಮೌಲ್ಯದ ಕಲಿಕಾ ಉಪಕರಣಗಳನ್ನು ಕೊಡುಗೆ ನೀಡಿದರು.

ಇದರ ಅಂಗವಾಗಿ ಶಾಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಕೊರೊನಾ ಸಂಕಷ್ಟದ ನಡುವೆ ದುಬಾರಿ ಹಣ ನೀಡಿ ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಪೋಷಕರ ಮನಸ್ಥಿತಿ ಬದಲಾಗಬೇಕಿದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುವ ಕಾರ್ಪೊರೇಟ್ ಸಂಸ್ಥೆಗಳAತೆ ಪೋಷಕರು ಕೂಡ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಿ ಸಹಕಾರ ನೀಡಬೇಕಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಪ್ರಾಸ್ತಾವಿಕವಾಗಿ ಕೂಡಿಗೆ, ನ. ೧೪: ಇಲ್ಲಿಗೆ ಸಮೀಪದ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಎಂಬಿಟೆಲ್ ಟೆಕ್ನಾಲಜಿಸ್ ಇಂಡಿಯಾ ವತಿಯಿಂದ ರೂ. ೫ ಲಕ್ಷ ಮೌಲ್ಯದ ಕಲಿಕಾ ಉಪಕರಣಗಳನ್ನು ಕೊಡುಗೆ ನೀಡಿದರು.

ಇದರ ಅಂಗವಾಗಿ ಶಾಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಕೊರೊನಾ ಸಂಕಷ್ಟದ ನಡುವೆ ದುಬಾರಿ ಹಣ ನೀಡಿ ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಪೋಷಕರ ಮನಸ್ಥಿತಿ ಬದಲಾಗಬೇಕಿದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುವ ಕಾರ್ಪೊರೇಟ್ ಸಂಸ್ಥೆಗಳAತೆ ಪೋಷಕರು ಕೂಡ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಿ ಸಹಕಾರ ನೀಡಬೇಕಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಪ್ರಾಸ್ತಾವಿಕವಾಗಿ ಉಪನ್ಯಾಸಕ ಸಿದ್ದೇಶ್, ಎಂಬಿಟೆಲ್ ಕಂಪೆನಿಯ ಎಂ.ವಿ. ಶರತ್, ಎಸ್. ಅಳಗಪ್ಪನ್ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರಂದರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಂಬಿಟೆಲ್ ಕಂಪೆನಿಯ ಪ್ರಮುಖರಾದ ಎಂ.ವಿ. ಶರತ್, ಎಸ್. ಅಳಗಪ್ಪನ್, ಶ್ರೀಕಾಂತ್, ದೀಪಕ್ ಹಾಗೂ ಮದನ್ ಅವರುಗಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಗ್ರಾ.ಪಂ. ಪ್ರತಿನಿಧಿ ಅನಿತಾ, ಗ್ರಾಮದ ಪ್ರಮುಖರಾದ ರಾಮಪ್ಪ, ದೇವಯ್ಯ, ಇಸಿಒ ರಾಧಾಕೃಷ್ಣ, ಎನ್‌ಜಿಒ ದಿನೇಶ್, ಶಿಕ್ಷಕರಾದ ವಸಂತ್ ಇದ್ದರು.

ಕಂಪೆನಿ ವತಿಯಿಂದ ಶಾಲೆಗೆ ತಲಾ ೨ ಲ್ಯಾಪ್ ಟಾಪ್, ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್, ವಾಲ್ ಸ್ಕಿçÃನ್, ೮ ಮ್ಯಾಗ್ನೆಟಿಕ್ ಗ್ರೀನ್ ಬೋರ್ಡ್, ೩ ಡೆಸ್ಕ್ಟಾಪ್, ೧ ಪ್ರಿಂಟರ್, ಲೈಬ್ರರಿಗೆ ೨೦೦ ಪುಸ್ತಕಗಳನ್ನು ಶಾಲೆ ಮುಖ್ಯ ಶಿಕ್ಷಕರ ಮೂಲಕ ಹಸ್ತಾಂತರಿಸಲಾಯಿತು.