ಕುಶಾಲನಗರ, ನ. ೧೪: ಕುಶಾಲನಗರ ರೋಟರಿ ವತಿಯಿಂದ ಕುಶಾಲನಗರ ತಾಲೂಕು ಕಚೇರಿಗೆ ಕಂಪ್ಯೂಟರ್ ಸಾಮಗ್ರಿಗಳನ್ನು ನೀಡಲಾಯಿತು.

ನೂತನ ಕಚೇರಿಯಲ್ಲಿ ಕಂಪ್ಯೂಟರ್ ಕೊರತೆಯಿಂದ ಸಾರ್ವಜನಿಕರ ಕೆಲಸಕ್ಕೆ ಅನಾನುಕೂಲವಾಗುತ್ತಿದ್ದ ಹಿನ್ನೆಲೆ ಸಂಸ್ಥೆಯ ಮೂಲಕ ೧ ಕಂಪ್ಯೂಟರ್ ಕೊಡುಗೆ ನೀಡಲಾಯಿತು ಎಂದು ರೋಟರಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ತಿಳಿಸಿದ್ದಾರೆ.

ರೋಟರಿ ಸಂಸ್ಥೆಯ ಪ್ರಮುಖರು ತಾಲೂಕು ತಹಶೀಲ್ದಾರ್ ಪ್ರಕಾಶ್ ಅವರ ಮೂಲಕ ಕಂಪ್ಯೂಟರ್ ಸಾಮಗ್ರಿಗಳನ್ನು ಹಸ್ತಾಂತರಿಸಿದರು.