ಸೋಮವಾರಪೇಟೆ,ನ.೧೪: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ.೮೫,೯೫,೩೪೬ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್ ಹೇಳಿದರು. ಗೌಡಳ್ಳಿ ಬಿಜಿಎಸ್ ಶಾಲಾ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಶೇ.೨೦ರಂತೆ ೩೬,೩೫,೯೬೮ ರೂ., ಡಿವಿಡೆಂಡ್ ನೀಡಲಾಗುವುದು ಎಂದರು.

ಸAಘದಲ್ಲಿ ೨೩೧೫ ಸದಸ್ಯರಿದ್ದು, ೨,೧೪,೩೫,೭೯೦ ರೂ. ಷೇರು ಮೊತ್ತವಿದೆ. ಸಂಘದಲ್ಲಿ ೩೩,೧೨,೫೦,೮೧೧ ರೂ. ದುಡಿಯುವ ಬಂಡವಾಳವಿದೆ. ೨೦೨೦-೨೧ರಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್‌ನಿAದ ಪಡೆದ ಕೆ.ಸಿ.ಸಿ ಸಾಲ ಶೇ.೧೦೦ರಷ್ಟು ಮರುಪಾವತಿ ಮಾಡಲಾಗಿದೆ. ೧೦೫೬ ಸದಸ್ಯರು ಕೆ.ಸಿ.ಸಿ. ಸಾಲ ಪಡೆದು ವ್ಯವಹಾರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಸಂಘದ ನೂತನ ಕಟ್ಟಡ ನಿರ್ಮಾಣದ ಬಗ್ಗೆ ಯೋಜನೆಯಿದೆ ಎಂದು ಸಭೆಗೆ ತಿಳಿಸಿದರು.

ಅಕಾಲಿಕ ಮಳೆಯಿಂದ ರೈತರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದು ಸಂಕಷ್ಟದಲ್ಲಿದ್ದಾರೆ. ಆಡಳಿತ ಮಂಡಳಿ ರೈತಪರ ನಿರ್ಧಾರಗಳನ್ನು ತೆಗೆದುಕೊಂಡು ಸಹಕಾರ ನೀಡಬೇಕೆಂದು ಕೆಲ ಸದಸ್ಯರು ಮನವಿ ಮಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಎನ್.ಎಸ್. ಪರಮೇಶ್, ನಿರ್ದೇಶಕರಾದ ಎಸ್.ಬಿ.ಭರತ್ ಕುಮಾರ್, ಜಿ.ಪಿ. ಸುನಿಲ್ ಕುಮಾರ್, ವಿ.ಎನ್.ನಾಗರಾಜ್, ಜಿ.ಈ. ಸುರೇಶ್, ಸಿ.ಈ. ವೆಂಕಟೇಶ್, ಕೆ.ಜಿ. ದಿನೇಶ್, ಎಚ್.ಎಸ್. ಪುಷ್ಪ, ಡಿ.ಪಿ. ಸುಮಿತ್ರ, ಟಿ.ಎಸ್. ವಾಣಿ, ಸಿ.ಎ. ಮಮತ, ಕಾರ್ಯನಿರ್ವಹಣಾಧಿಕಾರಿ ಕೆ.ಕೆ.ಶಿವಪ್ರಕಾಶ್ ಇದ್ದರು.