ಬಿಹಾರದಲ್ಲಿ ನಕ್ಸಲರ ಬೀಭತ್ಸ ಕೃತ್ಯ
ಗಯಾ, ನ. ೧೪: ಬಿಹಾರದಲ್ಲಿ ನಕ್ಸಲರು ಬೀಭತ್ಸ ಕೃತ್ಯ ನಡೆಸಿದ್ದಾರೆ. ನಾಲ್ವರು ಗ್ರಾಮಸ್ಥರನ್ನು ನೇಣಿಗೇರಿಸಿ ಹತ್ಯೆ ಮಾಡಿದ್ದಲ್ಲದೆ, ಅವರಿದ್ದ ಮನೆಗಳನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಗಯಾ ಜಿಲ್ಲೆಯಲ್ಲಿನ ದುಮಾರಿಯಾ ಬ್ಲಾಕ್ನ ಮೌನ್ಬಾರ್ ಗ್ರಾಮದಲ್ಲಿ ಮಾವೋವಾದಿಗಳು ಈ ಕೃತ್ಯ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಕ್ಸಲರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಮೌನ್ಬಾರ್ ಗ್ರಾಮದ ನಿವಾಸಿಯಾಗಿರುವ ಸರ್ಜುಸಿಂಗ್ ಅವರ ಮನೆ ಬಾಂಬ್ನಿAದ ಸ್ಫೋಟಿಸಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ಗಂಡ-ಹೆAಡತಿ ಸೇರಿದಂತೆ ನಾಲ್ವರನ್ನು ನೇಣಿಗೇರಿಸಿರುವುದಾಗಿ ತಿಳಿದುಬಂದಿದೆ. ಸರ್ಜು ಸಿಂಗ್ ಸೇರಿದಂತೆ ಸತ್ಯೇಂದ್ರ ಸಿಂಗ್, ಮಹೇಂದ್ರ ಸಿಂಗ್, ಮನೋರಮಾ ದೇವಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಈ ಹತ್ಯೆಯ ನಂತರ ನಕ್ಸಲಿಯರು ಗ್ರಾಮದಲ್ಲಿ ಪೋಸ್ಟರ್ ಅಂಟಿಸಿದ್ದು, ಈ ಕುಟುಂಬದ ಸದಸ್ಯರು ನಾಲ್ವರು ನಕ್ಸಲಿಯರ ಹತ್ಯೆಗೆ ಕಾರಣವಾಗಿದ್ದರು. ಈ ಹಿನ್ನೆಲೆ ಪ್ರತಿಕಾರ ತೀರಿಸಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ.
ಮಾವೋವಾದಿ ನಾಯಕನ ಬಂಧನ
ರಾAಚಿ, ನ. ೧೪: ಸಿಪಿಐ(ಮಾವೋವಾದಿ) ಸಂಘಟನೆಯ ಉನ್ನತ ನಾಯಕ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ದಾನನ್ನು ಜಾರ್ಖಂಡ್ನಲ್ಲಿ ಬಂಧಿಸಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ಸುಮಾರು ೫೦ ವರ್ಷಗಳಿಂದ ಸಕ್ರಿಯವಾಗಿದ್ದ ಪ್ರಶಾಂತ್ ಬೋಸ್ ಜೊತೆಗೆ ಅವರ ಪತ್ನಿ ಶೀಲಾ ಮರಾಂಡಿಯನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರವೇ ಇಬ್ಬರನ್ನು ಬಂಧಿಸಿದ್ದರೂ ಇಬ್ಬರ ಪತ್ತೆಯನ್ನು ದೃಢೀಕರಿಸಿಕೊಂಡ ನಂತರ ಇದೀಗ ಇಬ್ಬರ ಬಂಧನವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಕೋಲ್ಕತ್ತಾದ ಜಾದವ್ಪುರ ಮೂಲದ ಮಾವೋವಾದಿ ನಾಯಕ ಕಿಶನ್ ದಾಸ್ಗೆ ೭೫ ವರ್ಷ ವಯಸ್ಸಾಗಿದೆ ಎಂದು ಹೇಳಲಾಗುತ್ತಿದೆ. ಕಿಶನ್ ದಾ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜಾರ್ಖಂಡ್ನಲ್ಲಿ ಕಿಶನ್ ದಾ ವಿರುದ್ಧ ೭೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಿಶನ್ ದಾ ಅವರು ಮಾವೋವಾದಿಗಳ ಪೂರ್ವ ಪ್ರಾದೇಶಿಕ ಬ್ಯೂರೋದ ಕಾರ್ಯದರ್ಶಿಯಾಗಿದ್ದಾರೆ. ಕಿಶನ್ ದಾ ಬಂಗಾಳ, ಒಡಿಶಾ, ಛತ್ತೀಸ್ಗಢ, ಅಸ್ಸಾಂ ಮತ್ತು ಇತರ ರಾಜ್ಯಗಳಲ್ಲಿ ದೀರ್ಘಕಾಲ ಸಕ್ರಿಯರಾಗಿದ್ದರು. ಕಿಶನ್ ದಾ ವಿರುದ್ಧ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ.
ಪಂಜಾಬ್ - ಪೆಟ್ರೋಲ್ಗೆ ರೂ. ೧೬ ಇಳಿಕೆ
ನವದೆಹಲಿ, ನ. ೧೪: ಪಂಜಾಬ್ನಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ಅನ್ನು ಕಡಿತಗೊಳಿಸಿದ ನಂತರ ಪೆಟ್ರೋಲ್ ಬೆಲೆ ದೇಶದಲ್ಲೇ ಅತಿ ಹೆಚ್ಚು ಇಳಿಕೆ ಕಂಡಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ಗೆ ೫ ರೂಪಾಯಿ ಮತ್ತು ಡೀಸೆಲ್ ಮೇಲೆ ೧೦ ರೂಪಾಯಿ ಕಡಿಮೆ ಮಾಡಿದ ನಂತರ, ೨೫ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ವ್ಯಾಟ್ ಕಡಿಮೆ ಮಾಡುವ ಮೂಲಕ ಜನರಿಗೆ ಮತ್ತಷ್ಟು ನಿರಾಳ ನೀಡಿವೆ. ಅಬಕಾರಿ ಸುಂಕ ಮತ್ತು ವ್ಯಾಟ್ ಕಡಿತದ ಸಂಯೋಜಿತ ಪರಿಣಾಮವಾಗಿ ಪಂಜಾಬ್ನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ೧೬.೦೨ ರೂಪಾಯಿ ಮತ್ತು ಡೀಸೆಲ್ ಬೆಲೆ ೧೯.೬೧ ರೂಪಾಯಿ ಕಡಿಮೆಯಾಗಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್ನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ ೧೬.೦೨ ರೂಪಾಯಿ ಕಡಿತ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ ಲೀಟರ್ಗೆ ರೂ. ೧೩.೪೩ ಮತ್ತು ಕರ್ನಾಟಕ (ರೂ. ೧೩.೩೫) ನಂತರದ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಮೂರು ದಿನ ಮಳೆ
ಬೆಂಗಳೂರು, ನ. ೧೪: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯಭಾರ ಕುಸಿತದ ಪರಿಣಾಮ ೧೭ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು, ಶಿವಮೊಗ್ಗ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಇಂದಿನಿAದ ಇದೇ ನವೆಂಬರ್ ೧೬ ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ತಮಿಳುನಾಡಿನ ಚೆನ್ನೆöÊ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ವಾಯುಭಾರ ಕುಸಿತ ಈಗ ದುರ್ಬಲಗೊಂಡಿದೆ. ಆದರೆ ಮೇಲ್ಮೆöÊ ಸುಳಿಗಾಳಿ, ಆಂಧ್ರ ಪ್ರದೇಶ, ಒಡಿಶಾ ಮೂಲಕ ಪಶ್ಚಿಮ ಬಂಗಾಳದ ತನಕ ಹಾದುಹೋಗಿರುವ ಟ್ರಫ್ ಹಾಗೂ ಆಗ್ನೇಯ ಅರಬ್ಬಿ ಸಮುದ್ರದಲ್ಲಿನ ಮೇಲ್ಮೆöÊ ಸುಳಿಗಾಳಿಯ ಪ್ರಭಾವದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಾ. ೧೬ ರವರೆಗೆ ಮಳೆಯಾಗಲಿದೆ.
ಮೃತಪಟ್ಟ ಗರ್ಭಿಣಿ-ಜೀವಂತವಾಗಿ ಮಗುವನ್ನು ಹೊರತೆಗೆದ ವೈದ್ಯರು
ಗದಗ, ನ. ೧೪: ಗದಗಿನ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ(ದಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆ)ಯ ವೈದ್ಯರು ಮೃತಪಟ್ಟಿದ್ದ ಗರ್ಭಿಣಿಗೆ ವಿಶೇಷ ಶಸ್ತç ಚಿಕಿತ್ಸೆ ನಡೆಸುವ ಮೂಲಕ ಜೀವಂತವಾಗಿ ಮಗುವನ್ನು ಹೊರ ತೆಗೆದಿದ್ದು, ಸರ್ಕಾರಿ ವೈದ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗಜೇಂದ್ರಗಡ ತಾಲೂಕಿನ ಮುಶಿಗೆರೆ ಗ್ರಾಮದ ಗರ್ಭಿಣಿ ಅನ್ನಪೂರ್ಣ ಅಬ್ಬಿಗೇರಿ ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆತಂದಾಗ ಅವರು ಮೃತಪಟ್ಟಿದ್ದರು. ಒಂಬತ್ತು ತಿಂಗಳು ಪೂರ್ಣಗೊಂಡಿದ್ದರೂ ಅವರಿಗೆ ಯಾವುದೇ ಹೆರಿಗೆ ನೋವು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಕುಟುಂಬ ಅವರನ್ನು ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿತು. ಆದರೆ ಕಡಿಮೆ ಬಿಪಿ ಮತ್ತು ಇತರ ಸಮಸ್ಯೆಗಳಿಂದ ಮಹಿಳೆ ಸಾವನ್ನಪ್ಪಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯರು ಗರ್ಭಿಣಿಯ ಆರೋಗ್ಯವನ್ನು ಪರಿಶೀಲನೆ ಮಾಡಿದಾಗ ಉಸಿರಾಟ ನಿಂತುಹೋಗಿತ್ತು. ಆದರೆ ಸ್ಕಾö್ಯನಿಂಗ್ ಮಾಡಿ ನೋಡಿದಾಗ ಮಗುವಿನ ಹೃದಯಬಡಿತ ಇನ್ನೂ ಬಡಿದುಕೊಳ್ಳುತಿತ್ತಂತೆ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡ ವೈದ್ಯರು ಮಗುವನ್ನಾದರೂ ಬದುಕಿಸಬಹುದು ಎಂದು ೧೦ ನಿಮಿಷದೊಳಗೆ ಕುಟುಂಬಸ್ಥರೊAದಿಗೆ ಚರ್ಚಿಸಿ ಶಸ್ತçಚಿಕಿತ್ಸೆಗೆ ಮುಂದಾಗಿದ್ದಾರೆ. ಕೆಲವೇ ನಿಮಿಷದಲ್ಲಿ ವೈದ್ಯರು ಮೃತ ಗರ್ಭಿಣಿಯ ಗರ್ಭದಲ್ಲಿದ್ದ ಮಗುವನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
ಶಿಲ್ಪಾ ಶೆಟ್ಟಿ ಕುಟುಂಬದಿAದ ವಂಚನೆ ಆರೋಪ
ಮುಂಬೈ, ನ. ೧೪: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿತಿನ್ ಬಾರೈ ಎಂಬ ವ್ಯಕ್ತಿಯಿಂದ ಈ ದೂರು ದಾಖಲಾಗಿದ್ದು, ಶಿಲ್ಪಾ ಹಾಗೂ ರಾಜ್ ಕುಂದ್ರಾ ಸೇರಿ ೧.೫೧ ಕೋಟಿ ರೂಪಾಯಿ ವಂಚಿಸಿದ್ದಾರೆ ಅಂತಾ ದೂರು ನೀಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಸಂಕಷ್ಟಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪೋರ್ನ್ ಪ್ರಕರಣದಲ್ಲಿ ಸಿಕ್ಕಿಬಿದ್ದ ರಾಜ್ ಕುಂದ್ರಾ ಇದೀಗ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ವಂಚನೆ ಪ್ರಕರಣ ದಾಖಲಾಗಿದ್ದು, ೧.೫೧ ಕೋಟಿ ರೂಪಾಯಿ ಮೋಸ ಮಾಡಲಾಗಿದೆ ಅಂತಾ ಶಿಲ್ಪಾ ಹಾಗೂ ರಾಜ್ ವಿರುದ್ಧ ಆರೋಪ ಮಾಡಲಾಗಿದೆ. ೨೦೧೪-೨೦೧೫ರಲ್ಲಿ ಫಿಟ್ನೆಸ್ ಕಂಪನಿಯ ಮೂಲಕ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ತನಗೆ ೧.೫೧ ಕೋಟಿ ವಂಚಿಸಿದ್ದಾರೆ ಎಂದು ನಿತಿನ್ ಬಾರೈ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಾರೈ ಅವರ ದೂರಿನ ಮೇರೆಗೆ ಮುಂಬೈನ ಪೊಲೀಸರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಐಪಿಸಿ ಸೆಕ್ಷನ್ ೪೦೬, ೪೦೯, ೪೨೦, ೫೦೬, ೩೪ ಮತ್ತು ೧೨೦ (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿಚಾರಣೆಗೆ ಗುರಿಪಡಿಸುವ ಸಾಧ್ಯತೆ ಇದೆ.