ಕೂಡಿಗೆ, ನ. ೧೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ವಾರಗಳಿಂದ ಸುರಿಯು ತ್ತಿರುವ ಅಕಾಲಿಕ ಮಳೆಯಿಂದಾಗಿ ಕುಯಿಲಿನ ಹಂತಕ್ಕೆ ಬಂದ ಭತ್ತ ಉದುರುವ ಹಂತಕ್ಕೆ ತಲುಪಿ ಬಾರಿ ನಷ್ಟ ಉಂಟಾಗುತ್ತದೆ. ಗಾಳಿ ಮಳೆಗೆ ಬೆಳೆ ನೆಲಕಚ್ಚುತ್ತಿರುವ ಪ್ರಸಂಗ ಎದುರಾಗುತ್ತಿದೆ.

ಈ ಸಾಲಿನಲ್ಲಿ ಹಾರಂಗಿಯ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ಸಕಾಲದಲ್ಲಿ ನೀರಿನ ವ್ಯವಸ್ಥೆ ಸುಗಮವಾದುದರಿಂದ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಹೈಬ್ರೀಡ್ ತಳಿಯ ಭತ್ತ ಬೀಜಗಳನ್ನು ಬಿತ್ತನೆ ಮಾಡಿ ತಮ್ಮ ಗದ್ದೆಗಳಿಗೆ ನಾಟಿ ಮಾಡಿದ್ದರು. ಅದರಂತೆ ಉತ್ತಮವಾದ ಬೆಳೆಯು ಬಂದಿದೆ. ಹೈಬ್ರೀಡ್ ತಳಿಯ ಭತ್ತದ ಬೆಳೆಯು ಉತ್ತಮವಾಗಿ ಇರುವುದರಿಂದ ಈಗಾಗಲೇ ಬೆಳೆಯು ಕಾಳು ಕಟ್ಟಿ ಕೊಯ್ಯುವ ಹಂತಕ್ಕೆ ಬಂದಿದ್ದರೂ ಮಳೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಕೂಡಿಗೆಯ ಕೃಷಿ ಕ್ಷೇತ್ರದ ವ್ಯಾಪ್ತಿಯಲ್ಲಿ ಇಲಾಖೆಯ ವತಿಯಿಂದ ಬೆಳೆಸಲಾದ ೨೦ ಎಕರೆಗಳಷ್ಟು ಪ್ರದೇಶದಲ್ಲಿ ಹೈಬ್ರೀಡ್ ತಳಿಯಾದ ತುಂಗಾ ಭತ್ತದ ಬೀಜ ಸಸಿಗಳನ್ನು ನಾಟಿ ಮಾಡಲಾಗಿದೆ. ಮಳೆಯ ಅವಾಂತರದಿAದಾಗಿ ಕೊಯ್ಲು ಮಾಡಲು ಸಾಧ್ಯವಾಗದೆ ಉದುರುವಂತ ಪ್ರಸಂಗ ಎದುರಾಗಿದೆ. ಕೃಷಿ ಕ್ಷೇತ್ರದ ಆವರಣದಲ್ಲಿ ಬೆಳೆದ ಭತ್ತದ ಬೀಜವು ರಾಜ್ಯ ಸರ್ಕಾರದ ಬೀಜೋತ್ಪನ್ನ ಸಂಸ್ಥೆಗೆ ಕಳುಹಿಸುವ ಯೋಜನೆ ಮತ್ತು ಭತ್ತದ ಹುಲ್ಲನ್ನು ಜಿಲ್ಲಾ ರೈತರಿಗೆ ಮಾರಾಟ ಮಾಡುವ ಯೋಜನೆ. ಆದರೆ ಮಳೆಯಿಂದಾಗಿ ಎಲ್ಲಾವೂ ಹಾಳಾಗುವ ಪ್ರಸಂಗ ಎದುರಾಗಿದೆ.

ಈ ಸಾಲಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆ ಹಾಳಾಗುವುದರ ಜೊತೆಗೆ ಭತ್ತದ ಹುಲ್ಲು ಸಹ ಹಾಳಾಗುತ್ತದೆ. ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಬೆಳೆದ ಭತ್ತ ಬೆಳೆ ಕಾಳು ಕಟ್ಟುವ ಹಂತದಿAದ ಅಕಾಲಿಕ ಮಳೆಗೆ ತುತ್ತಾಗಿದೆ ಹಾರಂಗಿ ಅಚ್ಚುಕಟ್ಟು ಪ್ರದೇಶವು ಕೊಡಗಿನ ಗಡಿಭಾಗ ಶಿರಂಗಾಲ ದವರೆಗೆ ಕೃಷಿ ಇಲಾಖೆ ಯವರ ಸೂಚನೆಯಂತೆ ಹವಾಮಾನಕ್ಕೆ ಅನುಗುಣವಾಗಿ ಈ ಬಾರಿ ಹೈಬ್ರೀಡ್ ತಳಿಯ ನಾಟಿ ಮಾಡಿದ ಪರಿಣಾಮ ವಾಗಿ ಬೆಳೆÀಯು ಉತ್ತಮವಾಗಿ ಬಂದಿದೆ. ಇದೇ ರೀತಿಯಲ್ಲಿ ಈ ಬಾರಿ ಜೋಳದ ಬೆಳೆಯು ಸಹ ಅಕಾಲಿಕ ಮಳೆಯಿಂದಾಗಿ ಬೆಲೆಯ ಕುಸಿತವು ಉಂಟಾಗಿ ಈ ವ್ಯಾಪ್ತಿಯ ರೈತರಿಗೆ ಬಾರಿ ನಷ್ಟ ಉಂಟಾಗಿದೆ. ಜೊತೆಗೆ ಈ ಭಾಗಗಳಲ್ಲಿ ಬೆಳೆದ ಸಿಹಿ ಗೆಣಸು, ಮರ ಗೆಣಸು, ಶುಂಠಿ ಬಾಳೆ, ಸೇರಿದಂತೆ ಎಲ್ಲಾ ಬೆಳೆಗಳಿಗೆ ಸಮರ್ಪಕವಾದ ಬೆಲೆಯಿಲ್ಲದೆ ರೈತರು ಆತಂಕ ಪಡುವಂತಹ ಪ್ರಸಂಗ ಎದುರಾಗಿದೆ.

ಈ ಸಾಲಿನಲ್ಲಿ ಹಾರಂಗಿಯ ಅಚ್ಚುಕಟ್ಟು ಪ್ರದೇಶದ ರೈತರು ತುಂಗಾ, ತನು, ಬಿ೬೪, ರಾಜಮುಡಿ, ೬೪೭೨ ತಳಿ ಸೇರಿದಂತೆ ಹೈಬ್ರೀಡ್ ತಳಿಯ ಭತ್ತದ ಬೆಳೆಯು ಕೊಯ್ಯುವ ಹಂತಕ್ಕೆ ಬಂದಿರುವುದರಿAದ ಅಕಾಲಿಕ ಮಳೆಯಿಂದಾಗಿ ಬಾರೀ ನಷ್ಟ ಉಂಟಾಗುತ್ತಿದೆ ಎಂದು ಈ ವ್ಯಾಪ್ತಿಯ ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.