ನಾಪೋಕ್ಲು, ನ. ೧೪: ಯಾವುದೇ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಸರ್ವರ ಸಹಕಾರದಿಂದ ಮಾತ್ರ ಸಾಧ್ಯ ಎಂದು ನಾಪೋಕ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರೆಯಡ ಅಶೋಕ ಹೇಳಿದರು. ನಾಪೋಕ್ಲು ಕೊಡವ ಸಮಾಜದಲ್ಲಿ ಆಯೋಜಿಸಿದ ಸಂಘದ ೬೫ನೇ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಘವು ೨೦೨೦-೨೧ನೇ ಸಾಲಿನಲ್ಲಿ ೩೮,೪೬,೯೨೧ ರೂಗಳ ನಿವ್ವಳ ಲಾಭ ಗಳಿದೆ ಎಂದರು. ಇಂದು ಸಂಘವು ಸುಮಾರು ೨೪೮೨ ಸದಸ್ಯರನ್ನು ಹೊಂದಿದ್ದು. ಪಾಲು ಬಂಡವಾಳ ರೂ ೧೦,೯೨,೦೪೭೮ ಇದ್ದು. ವಾರ್ಷಿಕ ಸುಮಾರು ೧,೨೭,೮೨,೪೧,೬೭೬ ಕೋಟಿ ರೂ.ಗಳ ವಹಿವಾಟನ್ನು ನಡೆಸುತ್ತಿದೆ ಎಂದ ಅವರು, ಸಂಘದ ದುಡಿಯುವ ಬಂಡವಾಳ ೪೩,೨೨,೨೧,೦೦೫ ಆಗಿದ್ದು ಅದರಂತೆ ಕ್ಷೇಮ ನಿಧಿಯಲ್ಲಿ ೯೪,೦೮,೧೬೪ ರೂ. ಇದೆ ಎಂದು ತಿಳಿಸಿದರು.
ಈ ಸಂದರ್ಭ ಸಭೆಯಲ್ಲಿ ಮಾತನಾಡಿದ ಬಿದ್ದಾಟಂಡ ಜಿನ್ನು ನಾಣಯ್ಯ ಈಗಾಗಲೇ ಬ್ಯಾಂಕ್ ಉತ್ತಮ ಲಾಭದಲ್ಲಿದ್ದು ಸಂಘದ ಸದಸ್ಯರಿಗೆ ೫೦೦ ರೂ.ಗಳ ಭತ್ಯೆಯನ್ನು ನೀಡಬೇಕೆಂದು ಹೇಳಿದರು. ಸದಸ್ಯರ ಭತ್ಯೆಯನ್ನು ಏರಿಸಲು ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದÀÄ ಅಧ್ಯಕ್ಷರು ತಿಳಿಸಿದರು.
ನಂತರ ಮಾತನಾಡಿದ ಅಧ್ಯಕ್ಷ ಅಶೋಕ್, ಸಂಘದಿAದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಸುಮಾರು ೩೩ ವಿದ್ಯಾರ್ಥಿಗಳು ಇದರ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಸಂಘದಿAದ ಸದಸ್ಯರಿಗೆ ಕೃಷಿ ಸಾಲದಲ್ಲಿ ಕೆಸಿಸಿ (ಫಸಲು) ಸಾಲ, ಮಾಧ್ಯಮವಧಿ ಕೃಷಿ ಸಾಲಗಳು, ಕೃಷಿಯೇತರ ಸಾಲಗಳು, ವಾಹನ ಸಾಲಗಳು, ಜಾಮೀನು ಸಾಲ, ಮತ್ತು ಆಭರಣ ಸಾಲಗಳನ್ನು ನೀಡುತ್ತಾ ಬರಲಾಗಿದೆ. ಸ್ವ-ಸಹಾಯ ಸಂಘಗಳಿಗೆ ಮತ್ತು ಸೋಲಾರ್ ಅಳವಡಿಸಲು ಮತ್ತು ರೈತರಿಗೆ ಗೊಬ್ಬರ ಸಾಲವನ್ನು ಸಂಘವು ನೀಡಿದೆ ಎಂದರು. ಪ್ರಸಕ್ತ ಸಂಘವು ಮಾರಾಟ ಮಳಿಗೆ, ಅಕ್ಕಿ ಗಿರಣಿ ಮತ್ತು ಟ್ರಾಕ್ಟರ್, ಇದಲ್ಲದೆ ಲಾಕರ್ ಸೌಲಭ್ಯ ಮತ್ತು ಇ ಸ್ಟಾಂಪ್ ಸೌಲಭ್ಯವನ್ನು ಹೊಂದಿದ್ದು, ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕರಾಗಿದ್ದ ಕೃಷ್ಣಪ್ಪರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಕೆಲೇಟ್ಟೀರ ಮುತ್ತಮ್ಮ, ಸದಸ್ಯರಾದ ಕೇಟೋಳಿರ ಎಸ್. ಪೂವಯ್ಯ, ಎನ್.ಎಸ್. ಉದಯ ಶಂಕರ್, ಕಾಡಂಡ ಕರುಂಬಯ್ಯ, ಪಾಡಿಯಮ್ಮಂಡ ಮುರುಳಿಧರ್, ಕುಂಡ್ಯೋಳAಡ ಕವಿತ, ಬಿದ್ದಾಟಂಡ ರಾಧ, ಚಿಯಕಪೂವಂಡ ದೇವಯ್ಯ, ಚೋಕಿರ ಪೂವಪ್ಪ, ಕುಂದೈರೀರ ಕಿರಣ್, ಎಚ್.ಎ., ಬೊಳ್ಳು ಮತ್ತು ಕಾರ್ಯನಿರ್ವಾಣಾಧಿಕಾರಿ ಶಿವಚಾಳಿಯಂಡ ವಿಜೂ ಪೂಣಚ್ಚ, ಲೆಕ್ಕಿಗರಾದ ಕೆ.ಜೆ. ಶೈಲಜಇದ್ದರು.