ಗೋಣಿಕೊಪ್ಪಲು, ನ. ೧೪: ದಲಿತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ಪ್ರತಿಭಟನೆ ನಡೆಯಿತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮುಂದಾಳತ್ವದಲ್ಲಿ ನಗರದ ಪಾಲಿಬೆಟ್ಟ ರಸ್ತೆ ಜಂಕ್ಷನ್‌ನಿAದ ಆರಂಭಗೊAಡು ಗೋಣಿಕೊಪ್ಪಲುವಿನ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿತು.

ಮೆರವಣಿಗೆಗೆ ವಕೀಲ ಪ್ರದೀಪ್ ಚಾಲನೆ ನೀಡಿದರು. ದಲಿತರು ಹಲವು ಸಮಯದಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡಲೇ ಸರ್ಕಾರ ಸ್ಪಂದಿಸಬೇಕು. ಮೂಲಭೂತ ವ್ಯವಸ್ಥೆ, ವಸತಿ ಕಲ್ಪಿಸಬೇಕು. ದಲಿತರು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗ ಬೇಕೆಂದು ಪ್ರತಿಭಟನಾನಿರತು ಆಗ್ರಹಿಸಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಹಿರಿಯ ಹೋರಾಟಗಾರ ಟಿ.ಎನ್. ಗೋವಿಂದಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಸತೀಶ್ ಸಿಂಗಿ, ಜಿಲ್ಲಾ ಖಚಾಂಜಿ ಕುಮಾರ್ ಮಹದೇವ್, ರಾಜ್ಯ ಪೌರಕಾರ್ಮಿಕರ ಸಮಿತಿಯ ಅಧ್ಯಕ್ಷ ರಾಜು, ದಸಂಸ ಮುಖಂಡರಾದ ರಜನಿಕಾಂತ್, ಸತೀಶ್, ಶಿವಕುಮಾರ್, ಪಿ.ಸಿ. ರಾಮು, ವಿಜಯ್ ಕುಮಾರ್, ತಂಗರಾಜ್, ಪಳನಿ ಪ್ರಕಾಶ್, ಚಲುವ, ವಿಜಯ್ ಕುಮಾರ್ ಹಾಗೂ ಮುರುಗ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆ ಯಲ್ಲಿ ಭಾಗವಹಿಸಿ ದ್ದರು.

ತಾಲೂಕಿನ ವಿವಿಧ ಭಾಗದಿಂದ ಆಗಮಿಸಿದ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಸಂಖ್ಯೆ ಯಲ್ಲಿ ದಲಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.