ಮಡಿಕೇರಿ, ನ. ೧೪: ವೀರಾಜಪೇಟೆ ವಿಭಾಗ, ವೀರಾಜಪೇಟೆ ಅರಣ್ಯ ವಲಯದ ಹೆಗ್ಗಳ ಶಾಖೆ ಮತ್ತು ಚೆಯ್ಯಂಡಾಣೆ ಶಾಖೆ ವ್ಯಾಪ್ತಿಗೆ ಬರುವ ಗ್ರಾಮಗಳಾದ ಪಾಲಂಗಾಲ, ಕೆದಮುಳ್ಳೂರು, ಅರಮೇರಿ, ಕಡಂಗಮರೂರು, ಕರಡ, ಚೇಲಾವರ, ನರಿಯಂದಡ, ಕೋಕೇರಿ, ಮರಂದೋಡ ಗ್ರಾಮಗಳಲ್ಲಿ ತಾ. ೧೫ರಂದು (ಇಂದು) ಮತ್ತು ತಾ.೧೬ರಂದು (ನಾಳೆ) ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಉಪ ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.