ಗೋಣಿಕೊಪ್ಪಲು, ನ. ೧೪: ಪೌರಕಾರ್ಮಿಕರಿಗೆ ಕೇಂದ್ರ ಸರಕಾರ ಪದ್ಮಶ್ರೀ ಗೌರವ, ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರುಗಳ ಸಾಮಾಜಿಕ ಕಾರ್ಯವನ್ನು ಗುರುತಿಸಬೇಕು. ಇದರಿಂದ ಅವರುಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಭಿಮತ ವ್ಯಕ್ತಪಡಿಸಿದರು.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ತಾಲೂಕಿನ ವಿವಿಧ ಪಂಚಾಯತಿಗಳ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು,ಕೊರೊನಾ ಸಂದರ್ಭದಲ್ಲಿ ಪೌರಕಾರ್ಮಿಕರು ಮಾಡಿದ ಸೇವೆ ಯಾರು ಮರೆಯುವಂತಿಲ್ಲ. ಸರ್ಕಾರ ಇವರನ್ನು ಗುರುತಿಸಿ ಸನ್ಮಾನಿಸಬೇಕಾಗಿತ್ತು.

ಆದರೆ ಈ ಕೆಲಸವನ್ನು ದ.ಸಂ.ಸ. ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ನ್ಯಾಯಪರ ಹೋರಾಟಗಳಿಗೆ ಎಂದಿಗೂ ಜಯ ಲಭಿಸಲಿದೆ, ಹೋರಾಟ ನಿರಂತರ ವಾಗಿರಬೇಕು, ಪಾರದರ್ಶಕತೆಯಿಂದ ಕೂಡಿರಬೇಕು, ಅನ್ಯಾಯ ಕಂಡಗ ತೀವ್ರವಾಗಿ ಖಂಡಿಸಬೇಕು. ಪೌರಕಾರ್ಮಿಕರ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರಾನ್ನಗಿ ಮಾಡದೇ ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದÀÄ ಕಿವಿಮಾತನ್ನಾಡಿದರು.

ದಸಂಸ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಅಧ್ಯಕ್ಷತೆ ವಹಿಸಿ ಪ್ರತಿ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಲಾಗುತ್ತಿದೆ. ಹೋರಾಟದ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇವೆ ಎಂದರು.

ಮೈಸೂರು ವಿಭಾಗೀಯ ಸಂಚಾಲಕ ಬೆಳ್ಳೂರು ಕೃಷ್ಣಪ್ಪ ಮಾತನಾಡಿ ದಸಂಸ ಹೋರಾಟಕ್ಕೆ ತನ್ನದೇ ಆದ ಗೌರವವಿದೆ. ಹಿರಿಯರು ಕಟ್ಟಿ ಬೆಳೆಸಿದ ಸಂಘಟನೆಯನ್ನು ಯುವ ಸಮೂಹ ಮುಂದಕ್ಕೆ ಕೊಂಡ್ಯೊಯ್ಯಬೇಕು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್. ರಾಜು, ಪೌರಕಾರ್ಮಿಕರು ನಗರವನ್ನು ಶುಚಿಗೊಳಿಸುವುದರಿಂದ ನಾವೆಲ್ಲರೂ ಆರೋಗ್ಯವಾಗಿರಲು ಕಾರಣವಾಗಿದೆ. ಇವರಿಗೆ ಸಿಗುವ ಸವಲತ್ತುಗಳನ್ನು ಪಂಚಾಯಿತಿ ಸಕಾಲದಲ್ಲಿ ಸಮರ್ಪಕವಾಗಿ ನೀಡಬೇಕು, ಪೌರಕಾರ್ಮಿಕರನ್ನು ನಮ್ಮವರಂತೆ ಕಾಣಬೇಕು ಎಂದರು.

ದಸAಸ ಒಕ್ಕೂಟದ ಜಿಲ್ಲಾದ್ಯಕ್ಷ ಜೆ.ಆರ್. ಪಾಲಾಕ್ಷ ಮಾತನಾಡಿ, ದಸಂಸದಲ್ಲಿ ಹಲವು ಬಣಗಳಿವೆ. ಇವುಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರಲು ಹಿರಿಯರು ಚಿಂತಿಸಿದ್ದಾರೆ. ದಲಿತರನ್ನು ಒಗ್ಗೂಡಿಸುವ ಕೆಲಸ ಎಲ್ಲಾ ಬಣಗಳು ಮಾಡಬೇಕು ಎಂದರು.

ಗೋಣಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷೆ ಚೈತ್ರ ಬಿ.ಚೇತನ್ ಮಾತನಾಡಿ, ಪೌರಕಾರ್ಮಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಇವರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಂತ ಹಂತವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳನ್ನು ಶಿಕ್ಷಣ ಕೊಡಿಸಲು ಪೌರಕಾರ್ಮಿಕರು ಹಿಂದೇಟು ಹಾಕಬಾರದು ಎಂದÀÄ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದಸಂಸ ಮುಖಂಡರಾದ ಪಳನಿ ಪ್ರಕಾಶ್, ವಕೀಲರಾದ ಪ್ರದೀಪ್, ಮಾತನಾಡಿದರು.

ಹಿರಿಯ ಹೋರಾಟಗಾರ ಟಿ.ಎನ್. ಗೋವಿಂದಪ್ಪ, ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸತೀಶ್, ಮುಖಂಡರಾದ ರಜನಿಕಾಂತ್, ಹೆಚ್.ಇ. ಶಿವಕುಮಾರ್, ಪಿ.ಸಿ. ರಾಮು, ವಿಜಯ್ ಕುಮಾರ್, ತಂಗರಾಜ್, ಮುರುಗ, ಚಲುವ, ವಿಜಯ್ ಕುಮಾರ್, ಉಣ್ಣಿಕೃಷ್ಣ ಸೇರಿದಂತೆ ಅನೇಕ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಿಂಗಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಸಂಚಾಲಕ ಕುಮಾರ್ ಮಹಾದೇವ್ ಸ್ವಾಗತಿಸಿ, ವಂದಿಸಿದರು.

ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದುಡಿದ ತಾಲೂಕಿನ ವಿವಿಧ ಪಂಚಾಯಿತಿಗಳಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ೪೧ ಪೌರಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

-ಹೆಚ್.ಕೆ. ಜಗದೀಶ್