ಗೋಣಿಕೊಪ್ಪ ವರದಿ, ನ. ೧೩: ಶಿವಮೊಗ್ಗ ಕೃಷಿ ತೋಟಗಾರಿಕೆ ಮತ್ತು ಕೃಷಿ ಸಂಬAಧಿತ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನವುಲೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಕೊಡಗು ಜಿಲ್ಲೆಯ ಇಬ್ಬರು ಮಾದರಿ ಕೃಷಿಕರು ಜಿಲ್ಲಾಮಟ್ಟದ ಶ್ರೇಷ್ಠ ರೈತ ಪ್ರಶಸ್ತಿ ಸ್ವೀಕರಿಸಿದರು.

ಸಮಗ್ರ ಕೃಷಿ ಪದ್ಧತಿಗೆ ಜಿಲ್ಲೆಯಿಂದ ಹುದೂರು ಗ್ರಾಮದ ಮಾದರಿ ರೈತ ರವಿಶಂಕರ್ ಬಾರಿತ್ತಾಯ ಅವರಿಗೆ ಶ್ರೇಷ್ಠ ರೈತ ಪ್ರಶಸ್ತಿ, ಕಗ್ಗೋಡ್ಲು ಗ್ರಾಮದ ವೀಣಾ ಸುಧೀರ್ ಶ್ರೇಷ್ಠ ರೈತ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಿತ್ರದುರ್ಗ ಮುರುಗಮಠ ಸ್ವಾಮೀಜಿ ಶಿವಮೂರ್ತಿ ಮುರುಗಾ ಶರಣರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಕೆ. ನಾಯಕ್, ವಿಸ್ತರಣಾ ನಿರ್ದೇಶಕ ಡಾ. ಎಂ. ಬಿ. ಹೇಮ್ಲಾನಾಯಕ್, ಸಂಶೋಧನಾ ನಿರ್ದೇಶಕ ಡಾ. ಮೃತ್ಯುಂಜಯ ವಾಲಿ ಪ್ರದಾನ ಮಾಡಿದರು.