ಮಡಿಕೇರಿ, ನ.೧೪: ಧರ್ಮವನ್ನು ಆಧಾರವಾಗಿಟ್ಟುಕೊಂಡು ಜೀವನ ಸಾಗಿಸಿದರೆ ಖಂಡಿತವಾಗಿಯೂ ಮೋಕ್ಷ ಸಾಧನೆ ಸಾಧ್ಯವಾಗಲಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಪರ್ಕ ಪ್ರಮುಖರಾದ ಟಿ.ಎಸ್. ವೆಂಕಟೇಶ್ ಪ್ರತಿಪಾದಿಸಿದರು.
ರಾಷ್ಟಿçÃಯ ಸ್ವಯಂಸೇವಕ ಸಂಘದ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ನಡೆದ ಹಿಂದೂ ರಾಷ್ಟç ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು.
ಜಗತ್ತಿನ ಸಕಲ ಜೀವ ಜಲಚರಗಳಿಗೂ ಒಳ್ಳೆಯದಾಗಲಿ ಎಂದು ಹಿಂದೂ ಧರ್ಮ ಬಯಸುತ್ತದೆ. ಸತ್ಯವನ್ನು ನುಡಿಯುವುದರೊಂದಿಗೆ ಆರ್ಥಿಕ ಸಂಪಾದನೆ, ಆಸೆ, ಆಕಾಂಕ್ಷೆಗಳು ಧರ್ಮದ ಆಧಾರದಲ್ಲಿ ಲಭಿಸಬೇಕು. ಅಧಿಕಾರದ ಜೊತೆಗೆ ಕರ್ತವ್ಯ ಪ್ರಜ್ಞೆಯೂ ಅಗತ್ಯ, ಕರ್ತವ್ಯ ಮಾಡಿದರೆ ಅಧಿಕಾರ ತಾನಾಗಿಯೇ ದೊರೆಯುತ್ತದೆ.
ಪ್ರಕೃತಿಯನ್ನು ನಮ್ಮ ಅವಶ್ಯಕತೆ ಗಳಿಗೂ
(ಮೊದಲ ಪುಟದಿಂದ) ಮೀರಿ ಉಪಯೋಗಿಸಬಾರದು, ಶೋಷಣೆ ಮಾಡದೆ, ಭೋಗಿಸದೆ ಮುಂದಿನ ಪೀಳಿಗೆಗೆ ಕೊಡಬೇಕು. ಮಹಿಳೆಯರನ್ನು ಗೌರವಿಸುವುದು, ಬೇರೆಯವರ ವಸ್ತುಗಳಿಗೆ ಆಸೆ ಪಡೆದಿರುವುದು ಹಿಂದು ಧರ್ಮದ ಜೀವನ ಮೌಲ್ಯವಾಗಿದೆ. ಇದುವೇ ಹಿಂದೂ ಧರ್ಮದ ಸಾರವಾಗಿದೆ ಎಂದು ಹೇಳಿದರು.
ಹಿಂದು ರಾಷ್ಟç ಎಂದರೆ ಕೇವಲ ಸಂಖ್ಯೆ ಆಧಾರಿತವಲ್ಲ, ಮೌಲ್ಯಾಧಾರಿತವಾದ ದೇಶವಾಗಿದೆ. ಶೀಲ, ಚಾರಿತ್ರö್ಯ, ಪ್ರಾಮಾಣಿಕತೆ ಆಧಾರಿತವಾಗಿದೆ ಎಂದರು.
ಸAವಾದ ಕಾರ್ಯಕ್ರಮದಲ್ಲಿ ಡಾ.ಮನೋಹರ ಜಿ.ಪಾಟ್ಕರ್, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಬ್ಬೀರ ಸರಸ್ವತಿ, ಕಾರ್ಯದರ್ಶಿ ಕೋರನ ಸುನೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಅರೆಭಾಷೆ ಗೌಡ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ದಯಾನಂದ, ಧನಂಜಯ, ಪ್ರೇಮಾ ರಾಘವಯ್ಯ, ನಗರಸಭಾ ಅಧ್ಯಕ್ಷರು ಹಾಗೂ ರೋಟರಿ ಮಿಸ್ಟಿಹಿಲ್ಸ್ ಅಧ್ಯಕೆÀ್ಷ ಅನಿತಾ ಪೂವಯ್ಯ, ನಗರಸಭಾ ಸದಸ್ಯರಾದ ಅಪ್ಪಣ್ಣ, ಚಂದ್ರಶೇಖರ, ಸವಿತಾ ರಾಕೇಶ್, ಪ್ರಮುಖರಾದ ಅರುಣ್ ಕುಮಾರ್, ಶ್ರೀಧರ ಹೆಗ್ಡೆ ಹಾಗೂ ಇತರರು ಇದ್ದರು.
ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಡಾಲಿ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಪರ್ಕ ಪ್ರಮುಖರಾದ ಪ್ರಿನ್ಸ್ ಗಣಪತಿ ಸ್ವಾಗತಿಸಿ, ವಂದಿಸಿದರು.