ಮಡಿಕೇರಿ ನ.೧೪ : ಚೌರೀರ ಕುಟುಂಬಸ್ಥರು, ಆಕ್ಸ್ಸ್ಪೋರ್ಟ್ಸ್ ಮತ್ತು ಎಂಟಟೈನ್ಮೆAಟ್ ಹಾಗೂ ಹಾಕಿ ಕೂರ್ಗ್ ಅಸೋಸಿಯೇಷನ್ ನ ಸಂಯುಕ್ತಾಶ್ರಯದಲ್ಲಿ ತಾ. ೧೬ ರಿಂದ ಆರಂಭಗೊಳ್ಳಬೇಕಾಗಿದ್ದ ಕೊಡವ ಕುಟುಂಬಗಳ ನಡುವಿನ ಚೌರೀರ ಹಾಕಿ ಮತ್ತು ಫುಟ್ಬಾಲ್ ಪಂದ್ಯಾವಳಿಯನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ ಎಂದು ಪಂದ್ಯಾವಳಿಯ ಅಧ್ಯಕ್ಷ ಚೌರೀರ ಉದಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಂದ್ಯಾವಳಿಯು ಇದೇ ಡಿ.೨೬ ರಿಂದ ೨೦೨೨ ಜ. ೨ ರವರೆಗೆ ಮೂರ್ನಾಡಿನ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.