ಸೋಮವಾರಪೇಟೆ, ನ. ೧೪: ಸಮೀಪದ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ೨೪,೫೭,೭೧೮ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ತಿಳಿಸಿದರು.

ಚೌಡ್ಲು ರೈತ ಸಹಕಾರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದಲ್ಲಿ ೩೦,೫೮,೦೧,೦೯೬ ದುಡಿಯುವ ಬಂಡವಾಳವಿದೆ. ಈಗಾಗಲೇ ಸಹಕಾರ ಭವನ ಕಟ್ಟಡ ನಿರ್ಮಾಣವಾಗಿದ್ದು, ಆದಾಯದ ಮೂಲವಾಗಿದೆ. ಪ್ರಸಕ್ತ ವರ್ಷ ಸದಸ್ಯರಿಗ ಶೇ. ೫ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.

ಅಕಾಲಿಕ ಮಳೆಯಿಂದ ಕೃಷಿಕರು ದೊಡ್ಡ ಪ್ರಮಾಣದಲ್ಲಿ ಫಸಲು ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾರೆ. ಕಾಫಿ, ಕಾಳುಮೆಣಸು ನಾಶವಾಗಿದೆ. ರೈತರ ಬದುಕು ಕಷ್ಟವಾಗಿದೆ. ಈ ಬಾರಿ ಕೆ.ಸಿ.ಸಿ. ಸಾಲವನ್ನು ನವೀಕರಣ ಗೊಳಿಸಿಕೊಡಬೇಕೆಂದು ತೋಳೂರು ಶೆಟ್ಟಳ್ಳಿ ಸುಧಾಕರ್ ಮನವಿ ಮಾಡಿದರು.

ಸದಸ್ಯರು ಕೆ.ಸಿ.ಸಿ. ಸಾಲವನ್ನು ೩೬೫ ದಿನಗಳ ಒಳಗೆ ಪಾವತಿಸಿ, ಸರ್ಕಾರದ ಬಡ್ಡಿ ಸಹಾಯ ಧನವನ್ನು ಪಡೆಯಬೇಕು ಎಂದು ಅಧ್ಯಕ್ಷರು ತಿಳಿಸಿದರು. ಸಾಲವನ್ನು ಮರು ಪಾವತಿಸಿದ ಒಂದೇ ವಾರದಲ್ಲಿ ಹೊಸ ಸಾಲವನ್ನು ನೀಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ನಿರ್ದೇಶಕರು ಗಳಾದ ವೈ.ಎಂ. ನಾಗರಾಜ್, ಎಸ್.ಬಿ. ಈರಪ್ಪ, ಕವಿತಾ ವಿರೂಪಾಕ್ಷ, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು ದಳವಾಯಿ, ಕೆ.ಎಸ್. ವಿಜಯ, ಹೆಚ್.ಎಲ್. ವಿಜೇಂದ್ರ, ಎ.ಜೆ. ಕೃಷ್ಣಪ್ಪ, ಪಿ.ಎಸ್. ರವಿ ಕುಮಾರ್, ವಿ. ಹರೀಶ್, ಪದ್ಮಾವತಿ, ಬ್ಯಾಂಕ್ ಮೇಲ್ವಿಚಾರಕ ಟಿ.ಆರ್. ಪವನ್, ಕಾರ್ಯನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಇದ್ದರು.