ಮಡಿಕೇರಿ, ನ.೧೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕುಟುಂಬ-೨೦೨೧ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಪರ್ಲಕೋಟಿ ತಂಡ ಹೊರಹೊಮ್ಮಿದೆ. ಕುಡೆಕಲ್ಲು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಇAದು ನಡೆದ ಫೈನಲ್ ಪಂದ್ಯಾಟದಲ್ಲಿ ಪರ್ಲಕೋಟಿ ತಂಡ ಕುಡೆಕಲ್ಲು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಇದರೊಂದಿಗೆ ನಾಲ್ಕನೇ ಬಾರಿಗೆ ಪರ್ಲಕೋಟಿ ತಂಡ ಚಾಂಪಿಯನ್ ಪಟ್ಟಗಳಿಸಿದ್ದಂತಾಗಿದೆ. ಕುಡೆಕಲ್ಲು ತಂಡ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಒಂದು ಬಾರಿ ಚಾಂಪಿಯನ್ ಆಗಿದ್ದರೆ, ಈ ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.

ಅAತಿಮ ಪಂದ್ಯಾವಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಆಟಗಾರರನ್ನು ಪರಿಚಯಿಸಿಕೊಳ್ಳುವುದರ ಮೂಲಕ ಚಾಲನೆ ನೀಡಿದರು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್‌ಮಾಡಿದ ಪರ್ಲಕೋಟಿ ತಂಡ ನಿಗದಿತ ೬ ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು, ೮೧ ರನ್ ಗಳಿಸಿತು. ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ದರ್ಶನ್ ೪೪ ರನ್ ಗಳಿಸಿದರೆ, ಸಜನ್ ೩೬ ರನ್ ಗಳಿಸಿದರು. ಬೃಹತ್ ಮೊತ್ತದ ರನ್ ಬೆನ್ನತ್ತಿದ್ದ ಕುಡೆಕಲ್ಲು ತಂಡ ೫ ವಿಕೆಟ್ ಕಳೆದುಕೊಂಡು ೬೩ರನ್ ಗಳಿಸಿ, ೧೮ ರನ್‌ಗಳ ಅಂತರದಿAದ ಸೋಲು ಅನುಭವಿಸಿತು. ತಂಡದ ಪರ ಕಾರ್ತಿಕ್ ೪೪ ರನ್ ಗಳಿಸಿದರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ಸ್ನಲ್ಲಿ ಪರ್ಲಕೋಟಿ ತಂಡ ೪ ವಿಕೆಟ್‌ಗೆ ೬೧ ರನ್ ಗಳಿಸಿದರೆ, ದಂಬೆಕೋಡಿ ತಂಡ ೩ ವಿಕೆಟ್ ಕಳೆದುಕೊಂಡು ೫೬ ರನ್ ಗಳಿಸಿ ಸೋಲು ಅನುಭವಿಸಿತು. ೫ ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ ಪರ್ಲಕೋಟಿ ತಂಡ ಫೈನಲ್‌ಗೆ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ಸ್ನಲ್ಲಿ ಉಳುವಾರನ ತಂಡ ೭ ವಿಕೆಟ್‌ಗೆ ೪೯ ರನ್ ಗಳಿಸಿದರೆ, ಕುಡೆಕಲ್ಲು ತಂಡ ೨ ವಿಕೆಟ್ ಕಳೆದುಕೊಂಡು ೫೨ ರನ್ ಗಳಿಸಿ ೮ ವಿಕೆಟ್‌ಗಳ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.

ಬಹುಮಾನ ವಿತರಣೆ - ಸನ್ಮಾನ

ಸಂಜೆ ಗೌಡ ಸಮಾಜದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಯುವ ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ

(ಮೊದಲ ಪುಟದಿಂದ) ಶಾಸಕ ಕೆ.ಜಿ. ಬೋಪಯ್ಯ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃ ನಾರಾಯಣ ಕಜೆಗದ್ದೆ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ದಯಾನಂದ, ನಗರಸಭಾ ಸದಸ್ಯರುಗಳಾದ ಮಹೇಶ್ ಜೈನಿ, ಕುಟ್ಟನ ಶ್ವೇತಾ ಪ್ರಶಾಂತ್, ಸತೀಶ್‌ಕುಮಾರ್, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಇತರರು ಬಹುಮಾನ ವಿತರಣೆ ಮಾಡಿದರು. ಪಂದ್ಯಾವಳಿಯ ಸರಣಿಪುರುಷೋತ್ತಮ ಪ್ರಶಸ್ತಿಯನ್ನು ಪರ್ಲಕೋಟಿ ದರ್ಶನ್, ಪಂದ್ಯಪುರುಷೋತ್ತಮ ಪ್ರಶಸ್ತಿಯನ್ನು ಪರ್ಲಕೋಟಿ ಸಜನ್, ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ಕುಡೆಕಲ್ಲು ಕಾರ್ತಿಕ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಕುಡೆಕಲ್ಲು ಮಂಜು ಅವರುಗಳು ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಕ್ರೀಡಾಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ಣಯ್ಯನ ಈಶ್ವರ, ಕೀಜನ ಯತೀಶ್, ಬಳಪದ ವರುಣ್, ನಗರಸಭಾ ಸದಸ್ಯರುಗಳಾಗಿ ಆಯ್ಕೆಯಾದ ಜನಾಂಗದವರಾದ ಮಹೇಶ್ ಜೈನಿ, ಕುಟ್ಟನ ಶ್ವೇತಾ ಪ್ರಶಾಂತ್ ಮತ್ತು ಗೌಡ ಜನಾಂಗದ ಸಂಘಟನೆಗಾಗಿ ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಕ ಅಧ್ಯಕ್ಷರಾದ ತುಂತಜೆ ಗಣೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ಕೆದಂಬಾಡಿ ಸೋನಾಲ್ ಕವೀಂದ್ರ ಪ್ರಾರ್ಥಿಸಿದರೆ, ಯುವ ವೇದಿಕೆಯ ನಿರ್ದೇಶಕ ಪುದಿಯನೆರವನ ರಿಷಿತ್‌ಮಾದಯ್ಯ ಸ್ವಾಗತಿಸಿದರು. ಪರಿಚನ ಸತೀಶ್, ಕೋಚನ ಡೀನಾ ಅನೂಪ್, ಯಾಲದಾಳು ಮದನ್ ಸನ್ಮಾನಿತರನ್ನು ಪರಿಚಯಿಸಿದರು. ಕುಡೆಕಲ್ಲು ಸಂತೋಷ್ ನಿರೂಪಿಸಿದರೆ, ಮೂಡಗದ್ದೆ ವಿನೋದ್ ವಂದಿಸಿದರು.