ಮಡಿಕೇರಿ, ನ. ೧೩: ಎಫ್.ಐ.ಹೆಚ್. ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿ ತಾ. ೨೪ ರಿಂದ ಭುವನೇಶ್ವರದಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಜೂನಿಯರ್ ತಂಡದ ಕೋಚ್ ಆಗಿ ಕೊಡಗಿನವರಾದ ವೀರಾಜಪೇಟೆಯ ಬೊಳ್ಳೆಪಂಡ ಜೆ. ಕಾರ್ಯಪ್ಪ ಕಾರ್ಯನಿರ್ವಹಿಸಲಿದ್ದಾರೆ.
(ಮೊದಲ ಪುಟದಿಂದ) ವಿಶ್ವದ ೧೬ ರಾಷ್ಟçಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಭಾರತ ತಂಡ ತಾ. ೨೪ ರಂದು ಫ್ರಾನ್ಸ್ ವಿರುದ್ಧ ಪ್ರಥಮ ಪಂದ್ಯವನ್ನು ಆಡಲಿದೆ. ಭಾರತ ಸೀನಿಯರ್ ಹಾಕಿ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್ ಅವರು ಜೂನಿಯರ್ ತಂಡದ ಮೇಲ್ವಿಚಾರಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೀನಿಯರ್ ತಂಡದ ಆಟಗಾರರು ಹೊಂದಿರುವ ಮೌಲ್ಯಗಳನ್ನು ಜೂನಿಯರ್ ತಂಡಕ್ಕೂ ವರ್ಗಾಯಿಸಲು ಪ್ರಯತ್ನಿಸುವದಾಗಿ ಗ್ರಹಾಂ ರೀಡ್ ಹೇಳಿದ್ದಾರೆ.
೨೦೧೬ ರಲ್ಲಿ ನಡೆದ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಈ ಬಾರಿಯ ಪಂದ್ಯಾವಳಿಯಲ್ಲೂ ತಂಡ ಉತ್ತಮ ಸಾಧನೆ ತೋರಲಿದೆ ಎಂದು ಕೋಚ್ ಬಿ.ಜೆ. ಕಾರ್ಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.