ಮಡಿಕೇರಿ, ನ. ೧೨: ಕುಶಾಲನಗರದ ಪತ್ರಕರ್ತ ಹೆಚ್.ಎಂ. ರಘು ಕೋಟಿಗೆ ರಾಷ್ಟçಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಕನ್ನಡ ರಾಜ್ಯೋತ್ಸವ "ಕನ್ನಡ ಕಲಾಸಂಗಮ" ನವದೆಹಲಿ ಇವರ ವತಿಯಿಂದ ದೆಹಲಿಯಲ್ಲಿ ಹೊಟೇಲ್ ಲೀ ಕಾಡ್ರೆ ಇ-೨೩ ಈಷ್ಟ್ ಅಫ್ ಕೈಲಾಸ್‌ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಧುರೆ ವಿದ್ಯಾನಗರ ಕ್ಷೇತ್ರದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.