ಚಂದ್ರಶೇಖರಯ್ಯ ಮಾಹಿತಿ

ಕುಶಾಲನಗರ, ನ. ೧೨: ಕುಶಾಲ ನಗರ ಸಮೀಪದ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಐದು ವರ್ಷದ ಇಂಟಿಗ್ರೇಟೆಡ್ ಲಾ (ಕಾನೂನು) ತರಗತಿಗಳನ್ನು ತೆರೆಯಲಾಗುವುದು ಎಂದು ಕೇಂದ್ರದ ಪ್ರಭಾರ ನಿರ್ದೇಶಕ ಡಾ. ಕೆ.ಎಸ್. ಚಂದ್ರಶೇಖರಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಹೆಚ್ಚಿನ ವಿದ್ಯಾರ್ಥಿಗಳು ಜಿಲ್ಲೆಯಿಂದ ಹೊರ ಜಿಲ್ಲೆಗೆ ತೆರಳಿ ಕಾನೂನು ಸಂಬAಧಿತ ಶಿಕ್ಷಣ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ಈ ಸಾಲಿನಿಂದ ತರಗತಿಗಳನ್ನು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನೂರು ಎಕರೆ ವಿಶಾಲ ವಿಸ್ತೀರ್ಣವುಳ್ಳ ಈ ಕೇಂದ್ರ ಒಟ್ಟು ೧೪ ಕೋರ್ಸುಗಳನ್ನು ಒಳಗೊಂಡಿದೆ. ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದ್ದು, ವಿಜ್ಞಾನ ವಿಭಾಗದಲ್ಲಿ ಉತ್ತಮ ಪ್ರಯೋಗಾಲಯಗಳು ಇವೆ.

ಅಳುವಾರ ಕೇಂದ್ರದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಶೇ.೭೦ರಷ್ಟು ವಿದ್ಯಾರ್ಥಿಗಳು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ಕೇವಲ ಶೇ.೩೦ ರಷ್ಟು ಮಾತ್ರ ಜನ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಈ ಶೈಕ್ಷಣಿಕ ಸಾಲಿನಿಂದ ಕೊಡವ ಭಾಷೆಯಲ್ಲಿ ಪಿ.ಜಿ. ಡಿಪ್ಲೋಮಾ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಈ ಕೋರ್ಸಿನ ಉಪಯೋಗ ಪಡೆದುಕೊಳ್ಳಬಹುದು. ಆರು ತಿಂಗಳ ಸರ್ಟಿಫಿಕೇಟ್ ಡಿಪ್ಲೋಮಾ ಮತ್ತು ಒಂದು ವರ್ಷದ ಪಿ.ಜಿ. ಡಿಪ್ಲೋಮಾ ಕೋರ್ಸುಗಳಿವೆ.

ಈ ಸಂದರ್ಭ ಸೂಕ್ಷö್ಮ ಜೀವ ವಿಜ್ಞಾನ ವಿಭಾಗದ ನಿರ್ದೇಶಕಿ ಐ.ಕೆ. ಮಂಜುಳ, ಯೋಗ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ. ಶಾಮಸುಂದರ್. ಆಡಳಿತಾಧಿಕಾರಿ ಸವಿತಾ ಇದ್ದರು.