ಶನಿವಾರಸಂತೆ, ನ. ೧೨: ಶನಿವಾರಸಂತೆ ಗಡಿಭಾಗವಾದ ಚಂಗಡಹಳ್ಳಿ ಸಮೀಪದ ಕಾಫಿ ತೋಟದಲ್ಲಿ ಗುರುವಾರ ಸಂಜೆ ಜೀಪು (ಕೆಎ೧೨-ಎಂಎ ೮೦೪೦) ಮಗುಚಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
ಭದ್ರಾವತಿ ಮೂಲಕ ಗಣೇಶ್ (೩೨) ಚಂಗಡಹಳ್ಳಿಯಿAದ ಹೊಸೂರು ಕಡೆಗೆ ತೆರಳುತ್ತಿದ್ದಾಗ ಕಾಮನಹಳ್ಳಿ ಗ್ರಾಮದ ಸಮೀಪ ಜೀಪು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಫಿ ತೋಟಕ್ಕೆ ಮಗುಚಿ ಬಿದ್ದಿದೆ. ಗಣೇಶ್ ಸಂಬAಧಿಕರ ಮನೆಗೆ ಬಂದಿದ್ದರು ಎನ್ನಲಾಗಿದೆ. ಶನಿವಾರಸಂತೆ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.