ಮಡಿಕೇರಿ, ನ. ೧೩:ಶಾದುಲಿ ಫೈಝಿ ನೇಮಕ ಕೊಡಗು ಜಿಲ್ಲಾ ಉಪಖಾಝಿಯಾಗಿ ಕೊಟ್ಟಮುಡಿಯ ಆಜಾದ್ ನಗರದ ಕೆ.ಎಸ್. ಶಾದುಲಿ ಫೈಝಿ ಅವರನ್ನು ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ನೇಮಕ ಗೊಳಿಸಿದ್ದಾರೆ.

ಶೈಖುನಾ ಕೆ. ಎ.ಮಹಮೂದ್ ಮುಸ್ಲಿಯಾರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ನೇಮಕ ನಡೆದಿದೆ.

ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸುನ್ನೀ ಮರ್ಕಝ್'ನಲ್ಲಿ ನಡೆದ ಕೂರ್ಗ್ ಜಂಇಯ್ಯತುಲ್ ಉಲಮಾದ ಮುಶಾವರ ಸಭೆಯಲ್ಲಿ ಈ ನೇಮಕ ನಡೆದಿದ್ದು, ಇದೇ ಸಂದರ್ಭ ಕೂರ್ಗ್ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ, ಎಮ್ಮೆಮಾಡಿನ ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಅಲ್ ಐದರೂಸಿ ಅವರನ್ನು ಎ. ಪಿ. ಉಸ್ತಾದ್ ನೇಮಕ ಮಾಡಿದ್ದಾರೆ.