ಮಡಿಕೇರಿ, ನ. ೧೩ : ಶೀರ್ಷಿಕೆ ನೋಡಿ ಹಾಸ್ಯ ಎನಿಸಬಹುದು.., ಒಲೆ ಉರಿಯ ಮೇಲೆ ಕಾಫಿ ಕಾಯಿಸದೇ ಇನ್ನೆಲ್ಲಿ ಕಾಯಿಸುವ ದೆಂದು..? ವಾಸ್ತವ ಅದಲ್ಲ., ಇಲ್ಲಿ ಕಾಯಿಸುತ್ತಿರುವದು ಕಾಫಿ ಪುಡಿಯಿಂದ ಕುಡಿಯುವ ಕಾಫಿಯಲ್ಲ.., ಕಾಫಿ ಪುಡಿಗೆ ಬೇಕಾದ ಕಾಫಿ ಹಣ್ಣನ್ನು..!
ಅಚ್ಚರಿಯೆನಿಸಿದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರ ಬವಣೆಯಿದು. ಋತುಮಾನದಂತೆ ಕಾಫಿ ಬೆಳೆಯುವ ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಈಗ ಅರೆಬಿಕಾ ಕಾಫಿ ಹಣ್ಣಾಗಿ ಕುಯ್ಲು ಮಾಡುವ ಸಮಯ. ಕೆಲವೆಡೆ ರೊಬಸ್ಟಾ ಕೂಡಾ ಹಣ್ಣಾಗಿದೆ. ಆದರೆ ಕುಯ್ಲು ಮಾಡಲಾಗುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ನಿರಂತರ ಮಳೆಯಾಗುತ್ತಿ ರುವದರಿಂದ ಕಾಫಿ ಕುಯ್ಲು ಮಾಡಿ ಒಣಗಿಸಲು ಸಾಧ್ಯವಿಲ್ಲ ದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ತೋಟದೊಂದಿಗೆ ಕಾಫಿ ಕಣ ಕೂಡ ತೇವಾಂಶ ದಿಂದ ಕೂಡಿದೆ. ಕೆಲವರು ಗೋದಾಮು, ವಾಹನ ನಿಲುಗಡೆ ಶೆಡ್ ಹಾಗೂ ಏಲಕ್ಕಿ ಒಣಗಿಸುವ ಗೂಡು ಇರುವವರು ಗೂಡಿನಲ್ಲಿ ಕಾಫಿ ಒಣಗಲು ಹಾಕಿದ್ದಾರೆ. ವ್ಯವಸ್ಥೆ ಇಲ್ಲದವರು ಇನ್ನೂ ಕೂಡ ಕಾಫಿ ಕುಯ್ಲು ಕೆಲಸಕ್ಕೆ ಕೈ ಹಾಕದೆ ಮಳೆ ತೊಲಗಿ ಸೂರ್ಯನ ಆಗಮನಕ್ಕೆ ಕಾಯುತ್ತಿದ್ದಾರೆ. ಆದರೆ, ತನ್ನ ಆಯಸ್ಸು ಮುಗಿಯಿತೆಂದು ಹಣ್ಣಾ ಗಿರುವ ಕಾಫಿ ಮಾಗಿ ನೆಲಕ್ಕುರು ಳುತ್ತಿದ್ದರೆ, ಇನ್ನುಳಿದವು ಪಕ್ಷಿ, ಕಾಡು ಬೆಕ್ಕು, ಮಂಗಗಳು, ಕಾಡಾನೆಗಳಿಗೆ ಆಹಾರವಾಗುತ್ತಿವೆ..! ಇನ್ನೂ ಕುಯಿಲು ಮಾಡಿದ ಕಾಫಿ ಮಳೆ ನೀರಿನೊಂದಿಗೆ ಒಣಗಲು ಹಾಕಿದ ಜಾಗದಲ್ಲೇ ಕೊಳೆಯುವಂತಾಗಿದೆ..!
ಬೆAಕಿಯಲ್ಲಿ ಪ್ರಯತ್ನ..!
ಗಿಡಗಳಲ್ಲಿ ಹಣ್ಣಾಗಿ ಬೀಳುತ್ತಿರುವ ಕಾಫಿಯನ್ನು ನೋಡುತ್ತಲೇ ಬೆಳೆಗಾರರು ಕಂಗಾಲಾಗಿ ತಲೆ ಮೇಲೆ ಕೈಯಿಟ್ಟುಕೊಂಡು ದೇವರ ಮೊರೆ ಹೋಗುವಂತಾಗಿದೆ ಪರಿಸ್ಥಿತಿ. ಸುಮ್ಮನಿರಲೂ ಆಗದೆ ಕೆಲವರು ಕುಯ್ಲು ಆರಂಭಿಸಿದ್ದು, ಒಣಗಿಸಲಾಗಿ ಪರಿತಪಿಸುತ್ತಿದ್ದಾರೆ. ಈ ನಡುವೆ ಮಕ್ಕಂದೂರು ಗ್ರಾಮದ ಹೆಮ್ಮೆತ್ತಾಳು ನಿವಾಸಿ
(ಮೊದಲ ಪುಟದಿಂದ) ಕುದುಪಜೆ ವಿಕಾಸ್ ಅನ್ಯ ಮಾರ್ಗವಿಲ್ಲದೆ ತನ್ನ ಶೆಡ್ನಲ್ಲಿ ಇಟ್ಟಿಗೆಗಳನ್ನು ಜೋಡಿಸಿ ಶೀಟ್ ಹಾಕಿ ಅದರ ಮೇಲೆ ಕಾಫಿ ಒಣಗಿಸುವ ಪ್ರಯತ್ನ ನಡೆಸಿದ್ದಾನೆ. ಈ ಪ್ರಯತ್ನ ಎಷ್ಟು ಫಲಪ್ರದವಾಗುವದೋ ತಿಳಿಯದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹೇಗಾದರೂ ಮಾಡಿ ಕಾಫಿ ಒಣಗಿಸುವ ಅನಿವಾರ್ಯತೆ ಬೆಳೆಗಾರರದ್ದಾಗಿದೆ.
ಹಸಿ ಕಾಫಿ ಖರೀದಿಸುತ್ತಿಲ್ಲ..!
ಈ ಹಿಂದೆಯೆಲ್ಲ ಕಾಫಿ ಕುಯ್ಯಲು, ಒಣಗಿಸಲು ಕಷ್ಟವಾಗುವ ಬೆಳೆಗಾರರಿಂದ ಕಾಫಿ ವ್ಯಾಪಾರಿಗಳು ಭೋಗ್ಯದ ಆಧಾರದಲ್ಲಿ ಹಸಿ ಕಾಫಿ ಕುಯ್ದು ಕೊಂಡೊಯ್ಯುವದು ಹಾಗೂ ಬೆಳೆಗಾರರಿಂದ ಹಸಿ ಕಾಫಿ ಖರೀದಿ ಕೂಡ ಮಾಡುತ್ತಿದ್ದರು. ಆದರೀಗಿನ ಪರಿಸ್ಥಿತಿಯಲ್ಲಿ ನಷ್ಟದ ಲೆಕ್ಕಾಚಾರದಲ್ಲಿ ಯಾರೂ ಕೂಡ ಹಸಿ ಕಾಫಿ ಖರೀದಿಗೆ ಮುಂದಾಗುತ್ತಿಲ್ಲ. ಕಾಫಿ ಕ್ಯೂರಿಂಗ್ ವರ್ಕ್ಸ್ ಹೊಂದಿರುವವರು ಕೂಡ ಹಸಿ ಕಾಫಿ ಖರೀದಿಸುತ್ತಿಲ್ಲ. ಅವರಿಗೂ ಕೂಡ ಖರೀದಿಸಿದ ಕಾಫಿ ಒಣಗಿಸುವದು ಸಮಸ್ಯೆಯಾಗಿದೆ. ಪ್ರಸ್ತುತ ಅರೆಬಿಕಾ ಕಾಫಿ ಚೆರಿಗೆ ರೂ.೫೫೦೦ರಿಂದ ರೂ.೬೨೦೦ರಷ್ಟು ದರವಿದೆ. ಪಾರ್ಚ್ಮೆಂಟ್ಗೆ ೧೩೪೦೦ರಷ್ಟಿದೆ. ಹಸಿ ಕಾಫಿಗೆ ಹಣ್ಣಾದರೆ ರೂ.೪೦, ಹಣ್ಣು ಕಾಯಿ ಮಿಶ್ರಣವಾದರೆ ರೂ.೩೫ರಷ್ಟಿದೆ. ರೊಬಸ್ಟಾ ಚೆರಿಗೆ ರೂ. ೩೪೦೦ ರಿಂದ ೪೦೦೦, ಪಾರ್ಚ್ಮೆಂಟ್ಗೆ ೬೦೦೦ದಿಂದ ೬೩೦೦ರಷ್ಟಿದೆ. ಆದರೂ ಕಾಫಿ ಕುಯ್ಲು ಮಾಡಲಾಗದ ಪರಿಸ್ಥಿತಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ..! ಮೊದಲೇ ಅಲ್ಲಿ ಇಲ್ಲಿ ಸಾಲ, ಸೋಲ ಮಾಡಿ ಕೃಷಿ ಮಾಡಿಕೊಂಡು ಬೆಳೆಯನ್ನೇ ನಂಬಿಕೊAಡು ಜೀವನ ಸಾಗಿಸುತ್ತಿರುವ ಬೆಳೆಗಾರ ಪರಿಸ್ಥಿತಿ ಬೆಂಕಿಯಿAದ ಬಾಣಲೆಗೆ ಬಿದ್ದಂತಾಗಿದೆ..! ? ಸಂತೋಷ್