ಕುಶಾಲನಗರ, ನ. ೧೧: ಪಟ್ಟಣದಲ್ಲಿ ವಿಶೇಷಚೇತನರ ಕ್ಷೇಮಾಭಿವೃದ್ಧಿ ಕ್ಲಬ್ ಸ್ಥಾಪನೆ ಮೂಲಕ ನೊಂದ ವಿಶೇಷಚೇತನರ ಕುಟುಂಬಕ್ಕೆ ಜೀವನಾವಶ್ಯಕ ಸವಲತ್ತು ಒದಗಿಸಿ ವಿಶೇಷಚೇತನರ ಬಾಳಿಗೆ ಬೆಳಕು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಪರಿಷತ್ ಅಧ್ಯಕ್ಷ ಡಿ.ಕೆ. ಸುರೇಶ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲೆಯ ೨೮೦ ಮಂದಿ ವಿಶೇಷಚೇತನರು ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಗಳು ಒಳಗೊಂಡAತೆ ೪೦೦ ಮಂದಿ ವಿಕಲಚೇತನರನ್ನು ದತ್ತು ತೆಗೆದುಕೊಳ್ಳಲಾಗಿದೆ.
ಪ್ರತಿ ತಿಂಗಳು ವಿಶೇಷಚೇತನ ಕುಟುಂಬಕ್ಕೆ ಜೀವನಾವಶ್ಯಕ ಸವಲತ್ತು ಒದಗಿಸಲಾಗುವುದು. ತಿಂಗಳಿಗೆ ೨ ರಿಂದ ೪ ಸಾವಿರ ಧನ ಸಹಾಯ, ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವ ಮೂಲಕ ವಿಶೇಷಚೇತನರ ಬಾಳಿಗೆ ಬೆಳಕು ನೀಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನ್ಯಾಯಾಂಗ ಅಧಿಕಾರಿ ವರ್ಗ, ಉದ್ಯೋಗಿಗಳು, ಪೊಲೀಸರು, ಉದ್ಯಮಿಗಳು, ವರ್ತಕರು, ವ್ಯಾಪಾರಸ್ಥರು, ಮಾಧ್ಯಮ ಮಿತ್ರರು ಸೇರಿದಂತೆ ದಾನಿಗಳು ತಮ್ಮ ಒಂದು ದಿನದ ಆದಾಯ, ಸಂಬಳ ಸೇರಿದಂತೆ ತಮ್ಮ ಕೈಲಾದ ನೆರವು ನೀಡಿ ವಿಶೇಷಚೇತನರ ಬಾಳಿಗೆ ಬೆಳಕು ನೀಡಲು ಸಹಕಾರ ನೀಡುವಂತೆ ಡಿ.ಕೆ. ಸುರೇಶ್ ಮನವಿ ಮಾಡಿದರು.
ಈಗಾಗಲೇ ಶನಿವಾರಸಂತೆ ಗ್ರಾಮದಲ್ಲಿ ನಂದಿ ಬ್ರಾಂಡ್ ಹೆಸರಿನಲ್ಲಿ ಎಲ್‌ಇಡಿ ಬಲ್ಬ್ ತಯಾರಿಕಾ ಘಟಕ ಆರಂಭಿಸಿ ಮಾರಾಟ ಮಾಡಿ ಬಂದ ಶೇ. ೫೦ ರಷ್ಟು ಲಾಭವನ್ನು ವಿಶೇಷಚೇತನರ ಕ್ಷೇಮಾಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಸAಘಟನೆ ಮೂಲಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕ್ಲಬ್ ವಿಶೇಷಚೇತನರಿಗೆ ಉತ್ತೇಜನ ನೀಡಲಿದೆ. ಜೀವನದ ಸಂಧ್ಯಾಕಾಲ ಕಳೆಯಲು ಆಶ್ರಮ ಸ್ಥಾಪಿಸುವ ಉದ್ದೇಶ ಕ್ಲಬ್ ಹೊಂದಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ಲತೇಶ್ ಕುಮಾರ್, ನಿರ್ದೇಶಕ ಸಚಿನ್, ಸದಸ್ಯರಾದ ರವಿಚಂದ್ರನ್, ಬೆಳ್ಳಿಗೌಡ ಇದ್ದರು.