ಕಣಿವೆ, ನ. ೧೧: ವಾಹನಗಳ ಸಂಚಾರಕ್ಕೆ ಸಂಚಕಾರವಾಗಿರುವ ರಸ್ತೆಗಳು... ರಸ್ತೆಯ ನಡುವೆಯೇ ಹರಿದು ನಿಂತ ತ್ಯಾಜ್ಯ ಕಲುಷಿತ ನೀರು... ಕಾಡು ಗಿಡಗಳು ಬೆಳೆದು ಅನೈರ್ಮಲ್ಯ ಗೊಂಡಿರುವ ಬಡಾವಣೆಗಳು. ಇಲಿ-ಹೆಗ್ಗಣ ಗಳೊಂದಿಗೆ ಸೊಳ್ಳೆ-ನೊಣಗಳ ತಾಣವಾಗಿರುವ ಬಡಾವಣೆಗಳು.
ಇದು ಕುಶಾಲನಗರ ಪಟ್ಟಣದ ಮುಳ್ಳುಸೋಗೆ ಗ್ರಾಮ ಪಂಚಾ ಯಿತಿಯ ಹಲವು ಬಡಾವಣೆಗಳಲ್ಲಿ ಕಂಡು ಬರುತ್ತಿರುವ ಚಿತ್ರಣ.
ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಜಿಲ್ಲೆಯ ಮೂಲೆ ಮೂಲೆಗಳ ಮಂದಿ ಮಾತ್ರವಲ್ಲ, ನೆರೆಯ ಮೈಸೂರು ಜಿಲ್ಲೆಯ ಹಲವು ಮಂದಿ ಇಲ್ಲಿ ನಿವೇಶನ ಖರೀದಿಸಿ ವಾಸವಿದ್ದಾರೆ. ಕೊಡಗು ಜಿಲ್ಲೆಯ ಬಹುತೇಕ ಸರ್ಕಾರಿ ನೌಕರರು, ನಿವೃತ್ತ ಯೋಧರು ಇಲ್ಲಿ ವಾಸವಿದ್ದಾರೆ.
ಅರ್ಥಾತ್, ಪಂಚಾಯಿತಿ ವ್ಯಾಪ್ತಿಯ ಬಹುತೇಕ ಬಡಾವಣೆಗಳು ಸರ್ಕಾರದ ಮೂಲ ಸೌಕರ್ಯ ಗಳಿಂದ ವಂಚಿತಗೊAಡಿವೆ. ಈ ಬಡಾವಣೆಗಳಲ್ಲಿ ನಿವೇಶನ ಖರೀದಿಸಿರುವ ಹಾಗೂ ಖರೀದಿಸಿದ ನಿವೇಶನಗಳಲ್ಲಿ ಮುಗಿ ಬಿದ್ದು ಮನೆಗಳನ್ನು ಕಟ್ಟಿಕೊಂಡಿರುವ ನಿವಾಸಿಗಳು ಕನಿಷ್ಟ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದಲೂ ಸಮಸ್ಯೆಗಳ ಒಳಗೆ ಮುಳು ಮುಳುಗಿ ಮೇಲೇಳುತ್ತಿರುವ ಇಲ್ಲಿನ ನಿವಾಸಿಗಳ ಗೋಳನ್ನು ದಶಕಗಳಿಂದಲೂ ಕೇಳುವವರೇ ಇಲ್ಲ.
ಪಂಚಾಯಿತಿ ವ್ಯಾಪ್ತಿಯ ನಾಗೇಗೌಡ ಬಡಾವಣೆ, ಭಾರತಿ ಬಡಾವಣೆ, ಕಾಲಭೈರವೇಶ್ವರ ಬಡಾವಣೆ, ವಿಮಲ ವೀರಪ್ಪ ಬಡಾವಣೆ, ಅಣ್ಣೇಗೌಡ ಬಡಾವಣೆ, ಬಸವೇಶ್ವರ ಬಡಾವಣೆ ಹೀಗೆ ೨೦೦೮ರ ಮೊದಲು ಪರಿವರ್ತಿತಗೊಂಡ ಹಲವಾರು ಬಡಾವಣೆಗಳಲ್ಲಿ ನಿವಾಸಿಗಳಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಮೂಲ ಸೌಕರ್ಯಗಳೇ ಇಲ್ಲ. ಹಾಗಾಗಿ ಇಲ್ಲಿನ ನಿವಾಸಿಗಳು ಪಂಚಾಯಿತಿಗೆ ನಿತ್ಯವೂ ಅಲೆದು ಅಲೆದು ತಮ್ಮ ಮನೆಗಳ ಮುಂದೆ ಚರಂಡಿ ಮಾಡಿ, ರಸ್ತೆ ಮಾಡಿ ಕೊಡಿ ಎಂದು ಪರಿ ಪರಿಯಾಗಿ ಬೇಡುತ್ತಿದ್ದರೂ ಕೂಡ ಕಿವಿ ಕೇಳಿಸದ, ಕಾಣದ ಕಣ್ಣುಗಳುಳ್ಳ ಪಂಚಾಯಿತಿ ಆಡಳಿತ ಕಳೆದ ದಶಕಗಳಿಂದಲೂ ದಿವ್ಯ ನಿರ್ಲಕ್ಷö್ಯ ತಾಳುತ್ತಲೇ ಬಂದಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.
ಏನೋ ಕುಶಾಲನಗರದಲ್ಲೊಂದು ನಿವೇಶನ ಖರೀದಿಸಬೇಕು. ಅಂದದ ಮನೆಯೊಂದನ್ನು ಕಟ್ಟಬೇಕು ಎಂಬ ಕನಸು ಹೊತ್ತ ಬಹಳಷ್ಟು ಮಂದಿ ಜಿಲ್ಲೆಯ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದು ನಿವೇಶನಗಳನ್ನು ಖರೀದಿಸಿದ್ದಾರೆ. ಇನ್ನು ಹಲವು ಮಂದಿ ಸರ್ಕಾರಿ ನೌಕರರು ಬ್ಯಾಂಕುಗಳಿAದ ಸಾಲ ಸೌಲಭ್ಯ ಪಡೆದು ನಿವೇಶನಗಳನ್ನು ಖರೀದಿ ಸಿದ್ದಾರೆ. ಆದರೆ ಆ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಲು ಪಂಚಾಯಿತಿ ಪರವಾನಗಿ ನೀಡುತ್ತಿಲ್ಲ. ಕಾರಣ ಬಡಾವಣೆಗಳನ್ನು ಮಾಡಿಕೊಂಡು ನಿವೇಶನಗಳಾಗಿ ಪರಿವರ್ತನೆ ಮಾಡಿ ಮಾರಾಟ ಮಾಡಿಕೊಂಡ ಬಹುತೇಕ ಭೂಮಿ ಮಾಲೀಕರು ರಸ್ತೆ, ಚರಂಡಿ ಮತ್ತಿತರ ಮೂಲ ಸೌಕರ್ಯಗಳಿಗಾಗಿ ತಮ್ಮ ಬಡಾವಣೆಗಳಲ್ಲಿ ೩೦ ಅಡಿಗಳಷ್ಟು ರಸ್ತೆ ಬಿಡದೇ ಕೇವಲ ೨೦ ಅಡಿಗಳಷ್ಟು ಮಾತ್ರ ರಸ್ತೆ ಬಿಟ್ಟಿದ್ದಾರೆ.
ಇದರಲ್ಲಿ ಚರಂಡಿ, ರಸ್ತೆ, ಬೀದಿ ದೀಪ, ಕುಡಿಯುವ ನೀರು ಮತ್ತಿತರ ಸೌಕರ್ಯಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಪಂಚಾಯಿತಿ ಹೇಳುತ್ತಿದೆ. ಆದರೆ ಬಡಾವಣೆಗಳ ಮಾಲೀಕರಿಗೆ ನೋಟೀಸ್ ಜಾರಿ ತಾಣದಂತಾಗಿವೆ.
ಜೊತೆಗೆ ಇತ್ತೀಚಿನ ದಿನಗಳಲ್ಲಿ ಕುಶಾಲನಗರದ ಸುತ್ತಮುತ್ತ ಕಳ್ಳತನ ಪ್ರಕರಣಗಳು ಬೇರೆ ಜರುಗುತ್ತಿರುವ ಕಾರಣ ಕಾಡು ಗಿಡಗಳ ಪೊದೆ ಯಾಗಿರುವ ಇಲ್ಲಿನ ಬಡಾವಣೆಗಳಲ್ಲಿ ದುಷ್ಕರ್ಮಿಗಳು ಬಂದು ನುಸುಳುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಕುಡಿಯುವ ನೀರೇ ಇಲ್ಲ: ದಶಕಗಳಿಂದಲೂ ಮನೆಗಳನ್ನು ಕಟ್ಟಿ ವಾಸ ಮಾಡುತ್ತಿರುವ ಇಲ್ಲಿನ ನಿವಾಸಿಗಳಿಗೆ ಸ್ಥಳೀಯ ನಿವಾಸಿಗಳಿಗೆ ಕಾವೇರಿ ನದಿಯ ಕುಡಿಯುವ ನೀರನ್ನು ಪೂರೈಸುವಲ್ಲಿ ಸ್ಥಳೀಯ ಪಂಚಾಯಿತಿಗೆ ಇದೂವರೆಗೂ ಸಾಧ್ಯವಾಗಿಲ್ಲ. ಹಾಗಾಗಿ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗೆ ಸ್ವಂತ ಕೊಳವೆ ಬಾವಿಗಳನ್ನು ಅವಲಂಬಿಸದೇ ಅನ್ಯ ಮಾರ್ಗವೇ ಇಲ್ಲ. ಪಂಚಾಯಿತಿಯವರು ನೀರು ಕೊಡದಿದ್ದರೂ ಪರವಾಗಿಲ್ಲ. ನಾವು ನೆಮ್ಮದಿಲಿ ಓಡಾಡೋಕೆ ರಸ್ತೆಯನ್ನು, ಮನೆಯ ಬಳಕೆಯ ತ್ಯಾಜ್ಯ ನೀರು ಹರಿಸಲು ಚರಂಡಿಯನ್ನು ನಿರ್ಮಿಸಿ ಕೊಟ್ಟರೇ ಅದೇ ಬಹು ದೊಡ್ಡ ಉಡುಗೊರೆ ಎನ್ನುತ್ತಾರೆ ಬಡಾ ವಣೆಯ ನಿವಾಸಿಗಳಾದ ಅರುಣ, ಜ್ಯೋತಿ, ಶೋಭಾ, ಮೈಕೆಲ್ ಮೊದಲಾದವರು.
ತುರ್ತಾಗಿ ನಮ್ಮ ಸಮಸ್ಯೆಗಳಿಗೆ ಪಂಚಾಯಿತಿ ಸ್ಪಂದಿಸಬೇಕು. ಜಿಲ್ಲಾಧಿ ಕಾರಿಗಳು ಕೂಡ ಇತ್ತ ಧಾವಿಸಿ ನಮ್ಮ ಸಮಸ್ಯೆ ಅರಿತು ಪರಿಹರಿಸಬೇಕು ಎಂದು ಈ ನಿವಾಸಿಗಳು ಒತ್ತಾಯಿಸಿದ್ದಾರೆ.
- ಕೆ.ಎಸ್. ಮೂರ್ತಿ