ಚೆಟ್ಟಳ್ಳಿ, ನ. ೧೧: ಕೊಡಗು ಸುನ್ನಿ ವೆಲ್ಫೇರ್ ಸೌದಿ ರಾಷ್ಟಿçÃಯ ಸಮಿತಿ ವತಿಯಿಂದ "ಶಾಂತಿಯ ವಾಹಕರೇ ತಾವು ಅಮರರು" ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಮಿಲಾದ್ ಸಮಾವೇಶ ಹಾಗೂ ವಾರ್ಷಿಕ ಮಹಾಸಭೆ ರಿಯಾದ್ ಅಲ್ ಮಾಸ್ ರೆಸ್ಟೊರೆಂಟ್‌ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೆಲ್ಫೇರ್ ಜಿ.ಸಿ.ಸಿ. ಕೋಶಾಧಿಕಾರಿ, ಕೆ.ಸಿ.ಯ.ಫ್ ಐಎನ್.ಸಿ. ನೇತಾರ ಅಲಿ ಮುಸ್ಲಿಯಾರ್ ಬಹರೈನ್ ದುಆ ನಿರ್ವಹಿಸಿ, ಫಹೀಂ ರಹ್ಮಾನ್ ಸಮಾವೇಶವನ್ನು ಉದ್ಘಾಟಿಸಿದರು.

ರಾಷ್ಟಿçÃಯ ಅಧ್ಯಕ್ಷ ಸಿದ್ದೀಖ್ ಝುಹ್ರಿ ಅಯ್ಯಂಗೇರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಷಂಶುದ್ದೀನ್ ಬಾಖವಿ ಕಂಬಿಬಾಣಿ ಮತ್ತು ಹಂಸ ಮುಸ್ಲಿಯಾರ್ ಪೊನ್ನಂಪೇಟೆ ಮೌಲೀದ್ ಮಜ್ಲಿಸ್‌ನ ನೇತೃತ್ವ ವಹಿಸಿದ್ದರು.

ಮಹಮ್ಮದ್ ಕುಟ್ಟಿ ಸಖಾಫಿ ಒಳಮದಿಲ್ ಸಂಘಟನಾ ತರಬೇತಿಗೆ ನೇತೃತ್ವ ವಹಿಸಿದ್ದರು.

ಸುನ್ನಿ ವೆಲ್ಫೇರ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕರೆ ಮಾತನಾಡಿದರು. ಈ ಸಂದರ್ಭ ಸಿದ್ದೀಖ್ ಸಖಾಫಿ ಪೆರುವಾಯಿ ಕೆ.ಸಿ.ಎಫ್, ಅಶ್ರಫ್ ಕಿಲ್ಲೂರ್ ಕೆ.ಸಿ.ಎಫ್. ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಕೆ.ಎಸ್.ಡ್ಲ್ಯೂ.ಎ. ನಾಯಕರು ಇದ್ದರು.