ಮಡಿಕೇರಿ, ನ. ೧೨: ನಾಪೋಕ್ಲು ಕೊಡವ ಸಮಾಜದಲ್ಲಿ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಕೊಡವರು ಬುಡಕಟ್ಟು ಸ್ಥಾನಮಾನ ಹೊಂದಲು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದು, ಕೊಡವ ಜನಾಂಗದ ಅಸ್ಥಿತ್ವವನ್ನು ಉಳಿಸಲು ಸೆಕ್ಷನ್ ೩೪೦, ೩೪೨ರ ಅಡಿಯಲ್ಲಿ ಬುಡಕಟ್ಟು ಸ್ಥಾನಮಾನ ನೀಡಬೇಕೆಂದು ಮಾತ್ರ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.ಈ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಸಿಎನ್‌ಸಿ ಸಂಘಟನೆಗೆ ಸಮಾಜದ ಪರಿಪೂರ್ಣ ಬೆಂಬಲ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಎನ್‌ಸಿಯ ಇತರ ವಿಚಾರಗಳ ಬಗ್ಗೆ ಸಮಾಜ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅಧ್ಯಕ್ಷ ಮನುಮುತ್ತಪ್ಪ ಸ್ಪಷ್ಟಪಡಿಸಿದ್ದಾರೆ.