ಗೋಣಿಕೊಪ್ಪ ವರದಿ, ನ. ೧೨: ಪುತ್ತರಿ ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಅತ್ತೂರು ಕೃಷಿ ಕ್ಷೇತ್ರದಲ್ಲಿ ಅಡಿಕೆ ಕೊಯ್ಲು ಮತ್ತು ಔಷಧ ಸಿಂಪಡಣೆ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಯಿತು.

ಹೈಟೆಕ್ ದೋಟಿ, ಕೊಕ್ಕೆ ಬಳಸಿ ಭೂಮಿ ಮಟ್ಟದಿಂದಲೇ ಅಡಿಕೆ, ತೆಂಗಿನಕಾಯಿ ಕೊಯ್ಲು ಮಾಡುವ ಯಂತ್ರ, ಅಡಿಕೆ, ತೆಂಗು ಬೆಳೆ, ಕರಿಮೆಣಸು ಬಳ್ಳಿಗೆ ಔಷಧ ಸಿಂಪಡಣೆ ಮಾಡಲು ಇರುವ ಸುಲಭ ವಿಧಾನಗಳ ವಿನೂತನ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು. ಯಂತ್ರಗಳ ಅನ್ವೇಷಕ ಹೆಚ್.ಎಂ. ಬಾಲಸುಬ್ರಮಣ್ಯ ಯಂತ್ರಗಳಿAದ ತೋಟದ ಮಾಲೀಕ ಬೆಳೆ ಕೊಯ್ಲು, ಸಿಂಪಡಣೆ ಮಾಡುವುದರಿಂದ ಕಾರ್ಮಿಕರ ವೆಚ್ಚ ಉಳಿಸಲು ಸಲಹೆ ನೀಡಿದರು. ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಿಕೊಂಡು ಹಣ ಉಳಿಸುವ ವಿಧಾನಕ್ಕೆ ಯಂತ್ರಗಳ ಬಳಕೆಗೆ ಸಲಹೆ ನೀಡಿದರು. ಕೃಷಿಕರು ಮಾಹಿತಿ ಪಡೆದುಕೊಂಡರು.

ಕೆವಿಕೆ ವಿಜ್ಞಾನಿ ಡಾ. ಪ್ರಭಾಕರ್, ಪುತ್ತರಿ ರೈತ ಉತ್ಪಾದಕರ ಸಂಸ್ಥೆ ಲಿಮಿಟೆಡ್ ಸಿಇಒ ಹೊಟ್ಟೇಂಗಡ ರಾಣಾ ಪೊನ್ನಣ್ಣ ಇದ್ದರು.