ಸೋಮವಾರಪೇಟೆ, ನ. ೧೧: ರಿಸರ್ವ್ ಪೊಲೀಸ್ ಫೋರ್ಸ್ ಸಿಬ್ಬಂದಿಗಳಿAದ ಪಟ್ಟಣದಲ್ಲಿ ಪಥಸಂಚಲನ ನಡೆಯಿತು.
ಶಸ್ತçಧಾರಿಗಳಾಗಿದ್ದ ೫೦ ಮಂದಿ ಪೊಲೀಸರು, ಪಟ್ಟಣದ ಪೊಲೀಸ್ ಠಾಣೆಯಿಂದ ಕ್ಲಬ್‌ರಸ್ತೆ, ಕಕ್ಕೆಹೊಳೆ ಜಂಕ್ಷನ್, ವಿವೇಕಾನಂದ ಸರ್ಕಲ್, ಮಡಿಕೇರಿ ರಸ್ತೆ, ಸೋಮೇಶ್ವರ ದೇವಾಲಯ, ಮುಖ್ಯರಸ್ತೆ, ಬಸ್ ನಿಲ್ದಾಣ, ಸಿ.ಕೆ. ಸುಬ್ಬಯ್ಯ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.
ಆರ್‌ಪಿಎಫ್‌ನ ಅಸಿಸ್ಟೆಂಟ್ ಕಮಾಂಡೆAಟ್ ಪಾಂಡೆ, ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.