ಮಡಿಕೇರಿ, ನ. ೧೧: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಬೆಂಗಳೂರಿನ ವಿದ್ಯಾರ್ಥಿ ಕಿರಣ್ ಸೈಕಲ್ ಜಾಥಾದ ಮೂಲಕ ನಡೆಸುತ್ತಿರುವ ಜಾಗೃತಿ ಅಭಿಯಾನಕ್ಕೆ ಕೊಡಗು ಯುವಸೇನೆ ಬೆಂಬಲ ವ್ಯಕ್ತಪಡಿಸಿತು.
ಕರ್ನಾಟಕ ರಾಜ್ಯದ ೨೩ ಜಿಲ್ಲಾಧಿಕಾರಿಗಳಿಗೆ ಸೈಕಲ್ನಲ್ಲಿ ತೆರಳಿ ಈ ಬಗ್ಗೆ ಮನವಿಯನ್ನು ಸಲ್ಲಿಸಿ ಇಂದು ಕೊಡಗು ಜಿಲ್ಲೆಗೆ ಆಗಮಿಸಿ ಕೊಡಗು ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಮಾಡುತ್ತಿರುವುದಾಗಿ ಕಿರಣ್ ಅವರು ತಿಳಿಸಿದ್ದಾರೆ.
ಈ ಸಂದರ್ಭ ಕೊಡಗು ಯುವ ಸೇನೆಯ ಪ್ರಮುಖರಾದ ಕುಲದೀಪ್ ಪೂಣಚ್ಚ, ಮಾಚೆಟ್ಟಿರ ಸಚಿನ್ ಮಂದಣ್ಣ, ಜಯಣ್ಣ, ಸೋನಾಲ್ ಪೂಜಾರಿ, ಲತಾ ಬೋಪಯ್ಯ, ಶಿಲ್ಪಾ ಕಿರಣ್, ವೇಣು ಪೋನೇಟಿ, ಚಾರಿಮಂಡ ಮನು ದೇವಯ್ಯ, ಇದಾಯತುಲ್ಲಾ ಇನ್ನಿತರರು ಹಾಜರಿದ್ದರು.