ಮಡಿಕೇರಿ, ನ. ೧೧: ಕೊಡಗು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಚೇತನ್ ಎಂ. ಆದೇಶಿಸಿದ್ದಾರೆ. ಶಿರಂಗಾಲ ಗ್ರಾಮದ ಅಭಿವೃದ್ಧಿ ಅಧಿಕಾರಿಯಾಗಿದ್ದ ಹೆಚ್.ಡಿ. ಹರೀಶ್ ಆಲೂರು-ಸಿದ್ದಾಪುರಕ್ಕೆ, ದೊಡ್ಡಮಳ್ತೆಯ ಪಿಡಿಓ ಆಗಿದ್ದ ಹೇಮಲತಾ ಶಿರಂಗಾಲಕ್ಕೆ, ಹೆಬ್ಬಾಲೆಯ ರಾಕೇಶ್ ಚೆಟ್ಟಳ್ಳಿಗೆ, ಹರದೂರಿನ ಲೋಕೇಶ್ ತ್ಯಾಗತ್ತೂರಿಗೆ, ತ್ಯಾಗತ್ತೂರಿನ ಅನಿಲ್ ಕುಮಾರ್ ನೆಲ್ಲಿಹುದಿಕೇರಿಗೆ, ಕಂಬಿಬಾಣೆಯ ನಂದೀಶ್ ಕುಮಾರ್ ೭ನೇ ಹೊಸಕೋಟೆಗೆ, ಚೆಟ್ಟಳ್ಳಿಯ ಮಧುಮತಿ ಕಂಬಿಬಾಣೆಗೆ, ೭ನೇ ಹೊಸಕೋಟೆಯ ಅಸ್ಮ ಹೆಬ್ಬಾಲೆಗೆ, ಆಲೂರು ಸಿದ್ದಾಪುರದ ಪೂರ್ಣಿಮಾ ಹರದೂರಿಗೆ, ಕೊಡಗರಹಳ್ಳಿಯ ಗಿರೀಶ್ ಬ್ಯಾಡಗೊಟ್ಟಕ್ಕೆ, ಬ್ಯಾಡಗೊಟ್ಟದ ಹರೀಶ್ ಹೆಚ್.ಎಸ್. ದೊಡ್ಡಮಳ್ತೆಗೆ ವರ್ಗಾವಣೆಗೊಂಡಿದ್ದಾರೆ.