ವೀರಾಜಪೇಟೆ, ನ. ೧೧: ಗೋಣಿಕೊಪ್ಪ ಕಾಲೇಜಿನ ೧೯೮೩ ರ ಸಾಲಿನ ಬಿ.ಕಾಂ. ಹಳೆ ವಿದ್ಯಾರ್ಥಿಗಳ ಸಂಘವನ್ನು ಕಾವೇರಿ ಕಾಲೇಜು ಸಭಾಂಗಣದಲ್ಲಿ ಹಳೆಯ ವಿದ್ಯಾರ್ಥಿ ಹೊಟ್ಟೇಂಗಡ ರಮೇಶ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದೇಶ ವಿದೇಶದಲ್ಲಿ ನೆಲೆಗೊಂಡಿರುವ ಹಾಗೂ ಉನ್ನತ ಹುದ್ದೆಯಲ್ಲಿ ಇರುವವರು ಭಾಗವಹಿಸಿದ್ದರು. ಅನೇಕ ವರ್ಷಗಳ ಬಳಿಕ ತಮ್ಮ ಸಹಪಾಠಿಗಳನ್ನು ಕಂಡು ಹಸ್ತಲಾಘನ ಮಾಡಿದರು. ಮೂರು ವರ್ಷ ಕಾಲೇಜಿನಲ್ಲಿ ಒಂದಾಗಿ ಓದಿ ಹೋದವರನ್ನು ಒಂದೆಡೆ ಸೇರುವಂತೆ ಮಾಡಲು ಮದೆ ಕಾಲೇಜಿನ ಪ್ರಾಂಶುಪಾಲೆ ಟಿ.ಎಸ್. ಗುಲಾಬಿ ಹಾಗೂ ಅವರ ಪತಿ ಜರ್ನಾಧನ ವೇದಿಕೆ ರಚಿಸಿ ಸಂಘ ಸ್ಥಾಪನೆ ಮಾಡಿದಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದರು.

ಟಿ.ಎಸ್. ಗುಲಾಬಿಯವರು ಈ ಹಳೆ ವಿದ್ಯಾರ್ಥಿಗಳ ಸಂಘದ ಸ್ಥಾಪನೆ ಉದ್ದೇಶವನ್ನು ಸಭೆಯ ಮುಂದಿಟ್ಟರು. ಸಮಾರಂಭದಲ್ಲಿ ಹಲವು ಪ್ರಮುಖ ವಿಚಾರಗಳ ಚರ್ಚೆ ನಡೆಯಿತು. ಶೈಕ್ಷಣಿಕ, ಉದ್ಯೋಗ ವಿಚಾರಗಳ ಅವಲೋP

Àನ ನಡೆಸಲಾಯಿತು.

ವಿವಿಧ ಸ್ವರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಮಾರಂಭದಲ್ಲಿ ಕೆಲವು ಹಳೆ ವಿದ್ಯಾರ್ಥಿಗಳು ಈಗಾಗಲೇ ನಿಧನ ಹೊಂದಿದ್ದು ಅವರಿಗೆ ಸಂತಾಪ ವ್ಯಕ್ತಪಡಿಸಲಾಯಿತು.