ನಾಪೋಕ್ಲು, ನ. ೧೧: ನಾಪೋಕ್ಲು ಬೇತು ಗ್ರಾಮದ ಚೋಕಿರ ಕುಟುಂಬದ ವಾರ್ಷಿಕ ಪತ್ತಾಲೋದಿ ಗುರು ಕಾರೋಣರಿಗೆ ಎಡೆ ಇಡುವ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಚೋಕಿರ ದೊರೆಮಣಿ ಬೋಪಯ್ಯ ಹಾಗೂ ಬೆಂಗಳೂರು ದೂರದರ್ಶನದ ವಾರ್ತಾ ವಾಚಕಿಯಾಗಿ, ಗೋಣಿಕೊಪ್ಪ ಲಯನ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಚೋಕಿರ ಪವಿತ್ರಾ ಪೂವಯ್ಯ ಅವರನ್ನು ಸನ್ಮಾನಿಸ ಲಾಯಿತು. ಈ ಸಂದರ್ಭ ಕುಟುಂಬದ ಹಿರಿಯರಾದ ಉತ್ತಯ್ಯ, ನಂಜುAಡ, ಪೊನ್ನಪ್ಪ, ಪೂವಯ್ಯ ಹಾಗೂ ಕುಟುಂಬಸ್ಥರು ಇದ್ದರು.