ಗೋಣಿಕೊಪ್ಪಲು, ನ.೧೨: ಬೆಂಗಳೂರಿನ ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್ ನಡೆಸಿದ ಪದವಿ ಪರೀಕ್ಷೆಯಲ್ಲಿ ಮೂಲತಃ ವೀರಾಜಪೇಟೆಯ ನಿವಾಸಿ ಮೇರಿಯಂಡ ವಿವೇಕ್ ಪೂವಯ್ಯ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಮೇರಿಯಂಡ ಫ್ರೀಡಾ ಪೂವಯ್ಯ ಮತ್ತು ಸಂಕೇತ್ ಪೂವಯ್ಯ ದಂಪತಿಯ ಏಕೈಕ ಪುತ್ರರಾಗಿದ್ದಾರೆ.