ಸೋಮವಾರಪೇಟೆ, ನ. ೧೧: ತಾಲೂಕಿನ ಕಿಕ್ಕರಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ.
ಶಾಂತಳ್ಳಿ ಮಾರ್ಗದಿಂದ ಕಿಕ್ಕರಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ನಿನ್ನೆ ದಿನ ಕಿಕ್ಕರಳ್ಳಿ ಬಸ್ ನಿಲ್ದಾಣದ ಬಳಿ ಭಾರಿ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಮರಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿAದ ಕುಂಬಾರಗಡಿಗೆ, ಕಿಕ್ಕರಳ್ಳಿ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಸ್ಥಳಕ್ಕೆ ಧಾವಿಸಿದ ಇಲಾಖಾ ಸಿಬ್ಬಂದಿಗಳು, ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಚ್ಚೇರ ನಂಜುAಡ, ಸ್ಥಳೀಯರಾದ ಕನ್ನಿಗಂಡ ದಿನೇಶ್ ಪೊನ್ನಪ್ಪ, ಕನ್ನಿಗಂಡ ಕಿರಣ್ ಕಾವೇರಪ್ಪ, ಕನ್ನಿಗಂಡ ದರ್ಶನ್, ಪುದಿಯತಂಡ ಕೆ. ರವಿ ಅವರ ಸಹಕಾರದಿಂದ ಮರವನ್ನು ತೆರವುಗೊಳಿಸಿ, ವಿದ್ಯುತ್ ಮಾರ್ಗವನ್ನು ಸರಿಪಡಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಿದರು.