ನಾಪೋಕ್ಲು, ನ. ೧೧: ಕೊಡವ ಲ್ಯಾಂಡ್ ಮತ್ತು ಎಸ್ಟಿ ಪಟ್ಟಿಯಡಿ ರಾಜ್ಯಾಂಗ ಖಾತ್ರಿಗಾಗಿ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆಗೆ ನಾಪೋಕ್ಲು ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.

ನಾಪೋಕ್ಲು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು; ಕೊಡವರನ್ನು ೩೪೦ ಮತ್ತು ೩೪೨ ನೇ ವಿಧಿಯಂತೆ ಎಸ್ಟಿ ಪಟ್ಟಿಗೆ ಸೇರಿಸುವದು, ಕೊಡವ ಬುಡಕಟ್ಟಿನ ಪ್ರಾಚೀನ ನಾಡುಗಳನ್ನು ೨೪೪, ೩೭೧ ವಿಧಿ ಮತ್ತು ೬ನೇ ಶೆಡ್ಯೂಲ್ ಪ್ರಕಾರ ಕೊಡವ ಜನ್ಮ ಭೂಮಿಯನ್ನು ಕೊಡವ ಲ್ಯಾಂಡ್ ಎಂದು ಘೋಷಿಸುವದು, ಕೋವಿ ಹಕ್ಕಿಗೆ ರಾಜ್ಯಾಂಗ ಖಾತ್ರಿ, ಕೊಡವ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸುವದು ಸೇರಿದಂತೆ ಕೊಡವರ ಹಕ್ಕಿಗಾಗಿ ನಿರಂತರವಾಗಿ ಹೋರಾಡುತ್ತಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ಸಭೆಯಲ್ಲಿ ಕೊಡವ ಸಮಾಜದ ಆಡಳಿತ ಮಂಡಳಿಯ ಎಲ್ಲಾ ನಿದೆೆÃðಶಕರು ಉಪಸ್ಥಿತರಿದ್ದರು.