ಮಡಿಕೇರಿ, ನ. ೧೧: ಕೊಡಗು ಗೌಡ ನಿವೃತ್ತ ನೌಕರರ ಸಂಘ, ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ ವಿನೋದ್ ಮೆಡಿಕಲ್ಸ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ತಾ. ೧೪ ರಂದು ಹಾಕತ್ತೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ ನಡೆಯಲಿದೆ. ನೇತ್ರ ತಜ್ಞ ಡಾ. ಸಿ.ಆರ್. ಪ್ರಶಾಂತ್ ಕಣ್ಣು ತಪಾಸಣೆಯನ್ನು ನಡೆಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಶಿಬಿರದಲ್ಲಿ ಅವಶ್ಯ ಇದ್ದವರಿಗೆ ಉಚಿತ ಔಷಧಿಯನ್ನು ನೀಡಿ, ಉಚಿತ ಕನ್ನಡಕವನ್ನು ನೀಡುವ ದಿನಾಂಕವನ್ನು ತಿಳಿಸಲಾಗುವುದು.