ಮಡಿಕೇರಿ, ನ. ೧೨: ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಗರ್ಭಗುಡಿ ಪುನರ್ ನಿರ್ಮಾಣ ಸಂಬAಧ ತಾ. ೮ ರಿಂದ ೧೯ ರವರಗೆ ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತಿದೆ.
ತಾ. ೮ ರಂದು ಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ರುದ್ರಾಭಿಷೇಕ, ಮಹಾಪೂಜೆ ಹಾಗೂ ಮುಷ್ಠಿ ಕಾಣಿಕೆ ಸೇವೆ, ತಾ. ೯ ರಂದು ಸರ್ಪ ಸಂಸ್ಕಾರ ವಿಶೇಷ ಪೂಜೆ ನಡೆಯಿತು. ತಾ.೧೧ ರಂದು ಸರ್ಪ ಸಂಸ್ಕಾರ, ಶ್ರಾಧ್ದ, ತಿಲಾಹೋಮ, ಸರ್ಪ ಪ್ರಾಯಶ್ಚಿತ್ತ ಹೋಮ, ಆಶ್ಲೇಷ ಬಲಿ ಹಾಗೂ ವಿಶೇಷ ಮಹಾಪೂಜೆ ನಡೆಯಿತು.
ತಾ. ೧೮ ರಂದು ಬೆಳಿಗ್ಗೆ ೭ ಗಂಟೆಗೆ ಗ್ರಾಮದ ವನದೇವತೆ ಶ್ರೀ ಪೊನ್ನಂಗಾಲತ್ತಮೆಗೆ ವಿಶೇಷ ಪ್ರಾರ್ಥನಾ ಸೇವೆ ನಡೆಯಲಿದ್ದು, ಸಂಜೆ ೪ ಗಂಟೆಗೆ ಅಘೋರ ಹೋಮ, ಚರ ವಾಸ್ತು ಪೂಜೆ, ವಾಸ್ತು ಬಲಿ, ಬಾಲಾಲಯ ವಾಸ್ತು ಶುದ್ಧಿ, ವಾಸ್ತು ಪೂಜೆ, ಪ್ರಾಕಾರ ಬಲಿಗಳೊಂದಿಗೆ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ತಾ. ೧೯ ರಂದು ಬೆಳಿಗ್ಗೆಯಿಂದ ಪ್ರಾಯಶ್ಚಿತಹೋಮ, ಶ್ರೀ ಗಣಪತಿ, ಸುಬ್ರಹ್ಮಣ್ಯ, ಗೌರಿಶಂಕರನಿಗೆ ಕಲಶÀ, ಅನುಚ್ಞಾ ಕಲಶ, ಕಲಶಾಭಿಷೇಕ, ಶ್ರೀಗಣಪತಿ, ಸುಬ್ರಹ್ಮಣ್ಯ, ಶ್ರೀ ಗೌರಿಶಂಕರ ಉದ್ವಾಸನೆ ಹಾಗೂ ಬಲಾಲಯಕ್ಕೆ ಪ್ರತಿಷ್ಟಾಪನೆ ನಡೆಯಲಿದೆ. ನಂತರ ಮಹಾಪೂಜೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.