ಕೊಡಗಿನ ಇತಿಹಾಸದಲ್ಲಿ ಹಾಕಿ ಕ್ರೀಡೆಯಿಂದ ೧೧ ಒಲಂಪಿಯನ್, ೬೦ ಅಂರ‍್ರಾಷ್ಟಿçÃಯ ಆಟಗಾರರು ಹಾಗೂ ೫೦ಕ್ಕೂ ಅಧಿಕ ಮಂದಿ ಹಾಕಿ ರಾಷ್ಟಿçÃಯ ಶಿಬಿರಕ್ಕೆ ಆಯ್ಕೆಯಾಗಿರುತ್ತಾರೆ.
ಆದರೆ ಇಂದಿನ ಪರಿಸ್ಥಿತಿಯಲ್ಲಿ ಕೊಡಗಿನ ಕಿರಿಯ ಹಾಗೂ ಹಿರಿಯ ಹಾಕಿ ಆಟಗಾರರನ್ನು ಆಯ್ಕೆ ಶಿಬಿರಕ್ಕೆ ಪರಿಗಣಿಸುತ್ತಿಲ್ಲವೆನೋ ಎಂಬ ಭಾವನೆ ಬರುತ್ತಿದೆ. ಇದಕ್ಕೆ ಕಾರಣ ಆಯ್ಕೆ ಸಮಿತಿಯ ಸದಸ್ಯರ ಇಚ್ಛಾಶಕ್ತಿ ಕೊರತೆ ಇರಬಹುದೇ? ಎಂಬ ಪ್ರಶ್ನೆ ಕಾಡುತ್ತಿದೆ.
೧೯೭೨ ರ ಮ್ಯೂನೀಚ್ ಒಲಂಪಿಕ್ಸ್ ಮತ್ತು ೧೯೭೬ ಮಾಂಟ್ರಿಯಲ್ ಒಲಂಪಿಕ್ ಆಟಗಾರರಾದ ಬಿ.ಪಿ. ಗೋವಿಂದ್ ಕೊಡಗಿನವರೆ ಆಗಿದ್ದು ಇಂದಿಗೂ ಕೂಡ ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ.
ಭಾರತ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಎ.ಬಿ. ಸುಬ್ಬಯ್ಯ ಅವರು ಕೂಡ ಆಯ್ಕೆ ಸಮಿತಿಯಲ್ಲಿ ಇದ್ದರು ಹಾಗೂ ಡಾ. ಎಂ.ಪಿ. ಗಣೇಶ್ ಅವರು ಕೂಡ ಆಯ್ಕೆ ಸಮಿತಿಯಲ್ಲಿ ಇದ್ದರು.
ಇವರುಗಳ ಆದ್ಯತೆ ಕೊಡಗಿನಿಂದ ಅಂದರೆ ಕರ್ನಾಟಕದ ಮೂಲಕ ಕನಿಷ್ಟ ೫ ಕಿರಿಯ ಹಾಗೂ ಹಿರಿಯ ಆಟಗಾರರನ್ನು ಪ್ರತಿ ವರ್ಷ ಹಾಕಿ ಶಿಬಿರಕ್ಕೆ ಕರೆತರಬೇಕಿತ್ತು ಎಂಬುದು ನಮ್ಮ ಭಾವನೆ.
ಇದಾಗಿದ್ದಲ್ಲಿ ಕೊಡಗಿನ ಜನರ ಉಸಿರಾಗಿರುವ ಹಾಕಿ ಕ್ರೀಡೆಗೆ ಬಹಳ ದೊಡ್ಡ ಉಪಯೋಗವಾಗಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಾಣುತ್ತಿಲ್ಲ. ಆಯ್ಕೆ ಸಮಿತಿಯ ಸದಸ್ಯರಿಗೆ ಪ್ರತಿದಿನ ಸಂಭಾವನೆ ರೂ. ೫ ಸಾವಿರ ಮತ್ತು ೫ ಸ್ಟಾರ್ ಹೊಟೇಲ್‌ಗಳಲ್ಲಿ ತಂಗಲು ವ್ಯವಸ್ಥೆ ಇರುತ್ತದೆ.
ಇವರ ಆದ್ಯ ಕರ್ತವ್ಯ ತಮ್ಮ ತವರು ಜಿಲ್ಲೆಯ ಹಾಕಿ ಪ್ರತಿಭೆಗಳನ್ನು ಗುರುತಿಸಿ ಸಾಧ್ಯವಾದಷ್ಟು ಹೆಚ್ಚು ಕ್ರೀಡಾಪಟುಗಳನ್ನು ಶಿಬಿರಕ್ಕೆ ಕರೆತರಬೇಕು. ಕೊಡಗಿನ ತವರಾದ ಹಾಕಿ ಕ್ರೀಡೆ ಮತ್ತೆ ಹಳೆ ವೈಭವಕ್ಕೆ ಮರಳುವಂತಾಗಬೇಕು.
ಆಯ್ಕೆ ಸಮಿತಿ ಸದಸ್ಯರು ಹಳೆಯ ತಮ್ಮ ಗತದಿನಗಳನ್ನು ನೆನೆದು ಸ್ಫೂರ್ತಿಗೊಂಡು ಇಚ್ಛಾಶಕ್ತಿ ತೋರಿದಲ್ಲಿ ಕೊಡಗಿನ ಹಾಕಿ ಪ್ರತಿಭೆಗಳಿಗೆ ಉತ್ಸಾಹ ಹಾಗೂ ಉಜ್ವಲ ಭವಿಷ್ಯ ದೊರಕುವಲ್ಲಿ ಅನುಮಾನವಿಲ್ಲ. ಆಗಮಾತ್ರ ಕೊಡಗಿನ ಹಾಕಿ ವೈಭವ ಮತ್ತು ಕೊಡಗಿನ ಹಾಕಿ ಕಲಿಗಳು ಮುಂದೆ ಭಾರತ ತಂಡವನ್ನು ಪ್ರತಿನಿಧಿಸುವಲ್ಲಿ ಶಕ್ತರಾಗುತ್ತಾರೆ. ಜಿಲ್ಲೆಯಲ್ಲಿ ನಿಜವಾಗಲೂ ಪ್ರತಿಭೆಗಳಿಗೆ ಕೊರತೆಯಿಲ್ಲ.
ಕೊಡಗಿನ ಏಕೈಕ ಕ್ರೀಡಾಪಟು ೧೯೮೦ ರ ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದಂತ ಎಂ.ಎA. ಸೋಮಯ್ಯ ೩ ಒಲಂಪಿಕ್ಸ್ನಲ್ಲಿ ಆಡಿದ್ದರು ಮತ್ತು ಅವರು ಆಯ್ಕೆ ಸಮಿತಿ ಸದಸ್ಯರಾದಾಗ ಕೊಡಗಿನ ಹಾಕಿ ಪ್ರತಿಭೆಗಳಿಗೆ ತುಂಬಾ ಪ್ರೋತ್ಸಾಹವಿತ್ತು. ಇವರು ತಮ್ಮ ಸಮಯದಲ್ಲಿ ಸುಮಾರು ೧೦ಕ್ಕಿಂತ ಹೆಚ್ಚು ಕೊಡಗಿನ ಹಾಕಿ ಆಟಗಾರರನ್ನು ಭಾರತ್ ಪೆಟ್ರೋಲಿಯಂ ಕಂಪೆನಿ ಲಿಮಿಟೆಡ್(ಬಿ.ಪಿ.ಸಿ.ಸಿ.)ಗೆ ಕೆಲಸಕ್ಕೆ ಸೇರಿಸಿದ್ದರು.
ಇಂದಿನ ಸ್ಥಿತಿ ನೆನೆದಲ್ಲಿ ತುಂಬಾ ನೋವಾಗುತ್ತದೆ. ಏಕೆಂದರೆ ೨೦೨೦ ಟೊಕಿಯೋ ಒಲಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡಕ್ಕೆ ಯಾವುದೇ ಒಬ್ಬ ಹಾಕಿ ಕ್ರೀಡಾಪಟು ಕೂಡ ಕೊಡಗಿನಿಂದ ಆಯ್ಕೆ ಆಗಿರುವುದಿಲ್ಲ.
ಇದಕ್ಕೆ ಮುಖ್ಯ ಕಾರಣವೆಂದರೆ ಮೊದಲು ಆಟಗಾರರು ಹಾಕಿ ಶಿಬಿರಕ್ಕೆ ಆಯ್ಕೆ ಆಗಬೇಕು. ತದನಂತರ ಭಾರತ ತಂಡ ಪ್ರತಿನಿಧಿಸಬೇಕು. ಹಾಕಿ ಶಿಬಿರಕ್ಕೆ ಆಯ್ಕೆ ಆಗುವ ಆಟಗಾರರು ಆಯ್ಕೆ ಸಮಿತಿ ಸದಸ್ಯರಿಂದಲೇ ಆಯ್ಕೆಯಾಗಬೇಕು.
ಈ ವಿಷಯದಲ್ಲಿ ಆಯ್ಕೆ ಸಮಿತಿ ಸದಸ್ಯರು ಕೊಡಗಿನ ಕ್ರೀಡಾಪಟುಗಳನ್ನು ಕರೆತರುವಲ್ಲಿ ವಿಫಲವಾಗಿದ್ದಾರೆ. ಇನ್ನು ಮುಂದಾದರೂ ಆದತಪ್ಪು ಸರಿಮಾಡಿಕೊಂಡು ಉತ್ತಮ ದಾರಿಯಲ್ಲಿ ಸಾಗಲಿ ಎಂಬದು ಹಾರೈಕೆ.
ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಡಗಿನ ಹಾಕಿ ಆಟಗಾರರಿಗೆ ದೊರಕಿರುವುದಿಲ್ಲ. ಇದು ತುಂಬಾ ನಿರಾಸೆ ಮೂಡಿಸಿತು. ಏಕೆಂದರೆ ೧೯೭೫ರ ವಿಶ್ವಕಪ್ ಗೆದ್ದಂತ ಕಾಳಯ್ಯ ಅವರು ಒಲಂಪಿಯನ್ ಹಾಗೂ ಮಾಜಿ ಯೋಧ ಕರ್ನಲ್ ಬಿ.ಕೆ. ಸುಬ್ರಮಣಿ ಅವರು ಹಾಗೂ ಹೆಸರಾಂತ ಓಟಗಾರ್ತಿ ನಿರ್ಮಲಾ ಪೊನ್ನಪ್ಪ, ಹೆಸರಾಂತ ಬಾಸ್ಕೆಟ್‌ಬಾಲ್ ಆಟಗಾರ್ತಿ ಪುಷ್ಪಾ ಕುಟ್ಟಣ್ಣ ಹಾಗೂ ಸುಮಾರು ೨೦ ವರ್ಷಗಳಿಂದ ಕೌಟುಂಬಿಕ ಹಾಕಿ ಹಬ್ಬಗಳಲ್ಲಿ ಹೆಸರು ಮಾಡಿರುವ ಅನೇಕ ಹಾಕಿ ಆಟಗಾರರು ಇದ್ದು, ಕನಿಷ್ಟ ಇವರಿಗೆ ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅವರಿಗೊಂದು ಸನ್ಮಾನ ಕಾರ್ಯ ಮಾಡುವಲ್ಲಿ ಜಿಲ್ಲಾಡಳಿತವೂ ನಿರ್ಲಕ್ಷö್ಯವಹಿಸಿದೆ.
ಈಗಲಾದರು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ ಮತ್ತು ಕ್ರೀಡೆಯ ಅಭಿವೃದ್ಧಿಗೆ ಸಹಕರಿಸಲಿ ಮತ್ತು ಪ್ರೋತ್ಸಾಹಿಸಿ ಗೌರವಿಸಲಿ ಎಂಬುದು ನಮ್ಮ ಆಶಯ.
೨೦೨೦ ಟೊಕಿಯೋ ಒಲಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತ ಪುರುಷರ ತಂಡ ಹಾಗೂ ಅದ್ಭುತ ಸಾಧನೆ ಮಾಡಿದ ಮಹಿಳಾ ಹಾಕಿ ತಂಡ ನಾಲ್ಕನೆ ಸ್ಥಾನ ಪಡೆದಿದೆ.
ಇಂತಹ ಸುವರ್ಣಮಯ ಸಂದರ್ಭದಲ್ಲಿ ರಾಷ್ಟಿçÃಯ ಕ್ರೀಡೆಯಾದ ಹಾಕಿಗೆ ಪ್ರಾಶಸ್ತö್ಯಕೊಟ್ಟು ಹಾಕಿ ಕ್ರೀಡೆಗೆ ಪ್ರೋತ್ಸಾಹಿಸುವುದಕ್ಕೋಸ್ಕರ ಕರ್ನಾಟಕ ರಾಜ್ಯದ ಹಾಕಿ ಕ್ರೀಡಾಪಟುಗಳು ಮತ್ತು ಹಾಕಿ ಕ್ರೀಡೆ ಅಭಿವೃದ್ಧಿಗೆ ಅಪಾರ ಕೊಡುಗೆ ಕೊಟ್ಟ ಯಾವ ಒಬ್ಬ ಹಿರಿಯರಿಗೂ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ಕೊಡಗಿನ ಜನತೆಗೆ ತುಂಬ ನಿರಾಶೆ ಮೂಡಿಸಿದೆ.
ಈಗಿನ ಪರಿಸ್ಥಿತಿಯಲ್ಲಿ ರಾಜ್ಯ ಮತ್ತು ಜಿಲ್ಲಾಡಳಿತ ಹಾಗೂ ಕರ್ನಾಟಕ ಹಾಕಿ ಮಂಡಳಿ ಇದೆ ರೀತಿ ನಿರ್ಲಕ್ಷö್ಯ ಮಾಡಿದಲ್ಲಿ ಭವಿಷ್ಯದಲ್ಲಿ ಯಾರು ಹಾಕಿ ಆಡಲು ಮುಂದೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.
ಆ ಸ್ಥಿತಿ ಬಾರದಿರಲಿ ಹಾಗೂ ಕೊಡಗು ಹಾಕಿ ಗತವೈಭವ ಮತ್ತೆ ಮರಳಲಿ ಎಂಬ ಶುಭಹಾರೈಕೆ.ಮಾಡಿ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದAತೆ ನಿವೇಶನಗಳನ್ನು ಮಾರಾಟ ಮಾಡಿರುವ ಕಾರಣ ಆ ಬಡಾವಣೆಗಳಲ್ಲಿ ಅಗತ್ಯ ಸೌಲಭ್ಯಗಳಾದ ರಸ್ತೆ, ಚರಂಡಿಗಳನ್ನು ನಿರ್ಮಿಸಿಕೊಡಿ ಎಂದು ನೋಟೀಸ್ ಜಾರಿ ಮಾಡಬೇಕಿತ್ತು ಅಥವಾ ಜಿಲ್ಲಾಡಳಿತಕ್ಕೆ ಪಂಚಾಯಿತಿ ದೂರು ನೀಡಿ ನಿವಾಸಿಗಳ ಪರವಾಗಿ ನಿಲ್ಲಬೇಕಿತ್ತು. ಆದರೆ ಏನೂ ಕೂಡ ಮಾಡದೇ ಮೌನ ವಹಿಸಿದೆ ಎಂಬುದು ಸ್ಥಳೀಯ ನಿವಾಸಿಗಳ ಅಸಮಾಧಾನವಾಗಿದೆ.
ಈಗಾಗಲೇ ಆತುರಕ್ಕೆ ಬಿದ್ದು ನಿವೇಶನಗಳನ್ನು ಖರೀದಿಸಿ ಮನೆಗಳನ್ನು ಕಟ್ಟಿರುವ ಕೆಲವು ಮಂದಿ ಬೇರೆಯವರಿಗೆ ಬಾಡಿಗೆಗೆ ಮನೆಗಳನ್ನು ನೀಡಿದ್ದಾರೆ. ಇನ್ನು ಕೆಲವರು ಅಲ್ಲೇ ವಾಸವಿದ್ದಾರೆ. ಆದರೆ ಮನೆಗಳಲ್ಲಿ ನಿತ್ಯವೂ ಬಳಕೆಯಾಗುವ ತ್ಯಾಜ್ಯ ನೀರು ಹರಿಯಲು ಚರಂಡಿ ಇಲ್ಲದ ಕಾರಣ ಮನೆಗಳ ಮುಂಬದಿ-ಹಿAಬದಿಗಳ ಒಂದಷ್ಟು ದೂರ ಪಿವಿಸಿ ಪೈಪ್
- ಚೆಪ್ಪುಡಿರ ಕಾರ್ಯಪ್ಪ, ಹಾಕಿ ವೀಕ್ಷಕ ವಿವರಣೆಕಾರರು, ತಿತಿಮತಿ, ನೊಕ್ಯ