ಸೋಮವಾರಪೇಟೆ, ನ. ೧೧: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಮೀಪವಿರುವ ಅಂಬೇಡ್ಕರ್ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ಅನಾದರಕ್ಕೆ ಒಳಗಾಗಿದ್ದು, ಇದೀಗ ಕೆಸರಿನ ಕೊಂಪೆಯಾಗಿದೆ. ಮಳೆ ನೀರಿನಿಂದ ಈ ರಸ್ತೆಯಲ್ಲಿ ಸಣ್ಣಪುಟ್ಟ ಕೆರೆಗಳು ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಶಾಲೆಗೆ ತೆರಳಲು ಸರ್ಕಸ್ ಮಾಡಬೇಕಾದ ಸ್ಥಿತಿಗೆ ತಲುಪಿದೆ. ರಸ್ತೆಯ ಗುಂಡಿಗಳಲ್ಲಿ ಕೊಳಚೆ ನೀರು ನಿಂತಿರುವುದರಿAದ ರಸ್ತೆಯ ಬದಿಯಲ್ಲಿ ಶಾಲೆಗೆ ತೆರಳಬೇಕಿದೆ.
ಇದರೊಂದಿಗೆ ಟರ್ಫ್ ಮೈದಾನಕ್ಕೆ ತೆರಳಲೂ ಸಹ ಇದೇ ರಸ್ತೆಯನ್ನು ಅವಲಂಭಿಸಿದ್ದು, ಬಾಲಕರ ವಸತಿ ಗೃಹ, ಅಂಬೇಡ್ಕರ್ ಶಾಲೆಗೆ ತೆರಳುವ ಮಕ್ಕಳು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಕಳೆದ ಅನೇಕ ದಶಕಗಳಿಂದಲೇ ಈ ರಸ್ತೆ ದುಸ್ಥಿತಿಯಲ್ಲಿದ್ದು, ಜನಪ್ರತಿನಿಧಿಗಳು ಹಾಗೂ ಅಭಿಯಂತರರು ಕಣ್ಣಿದ್ದೂ ಕುರುಡರಂತಾಗಿದ್ದಾರೆ ಎಂದು ಮಕ್ಕಳ ಪೋಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕನಿಷ್ಟ ಪಕ್ಷ ರಸ್ತೆಯ ಗುಂಡಿಗಳನ್ನು ಮುಚ್ಚಲೂ ಸಹ ಇವರಿಂದ ಸಾಧ್ಯವಾಗುತ್ತಿಲ್ಲ. ಪರಿಣಾಮ ಮಳೆ ಬಿದ್ದರೆ ಶಾಲೆಗೆ ತೆರಳಲು ಸಾಧ್ಯವಾಗುವುದಿಲ್ಲ. ಇನ್ನಾದರೂ ಸಂಬAಧಿಸಿದ ಅಭಿಯಂತರರು ಕಣ್ಬಿಟ್ಟು ನೋಡಿ ರಸ್ತೆಯ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಿ ಎಂದು ಪೋಷಕರು ಒತ್ತಾಯಿಸಿದ್ದಾರೆ.