ಸೋಮವಾರಪೇಟೆ, ನ. ೧೧: ಸಮೀಪದ ಐಗೂರು ಗ್ರಾಮದ ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣಮೂರ್ತಿ ಅಮ್ಮನವರ ಕ್ಷೇತ್ರದಲ್ಲಿ ತಾ. ೨೭ ರಿಂದ ಮಧ್ಯಂತರ ಜಾತ್ರಾ ಮಹೋತ್ಸವ ನೆರವೇರಲಿದೆ ಎಂದು ದೇವಾಲಯದ ದೈವದರ್ಶಿ ಆನಂದ ಪೂಜಾರಿ ತಿಳಿಸಿದ್ದಾರೆ. ತಾ. ೨೭ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ, ಸಂಜೆ ೭ ಗಂಟೆಯಿAದ ಭಂಡಾರ ಪೂಜೆ, ೮.೩೦ ರಿಂದ ಅನ್ನದಾನ, ರಾತ್ರಿ ೧೦ ಗಂಟೆಯಿAದ ಬೆಳಗ್ಗಿನವರೆಗೆ ಶ್ರೀ ಪಾಷಾಣ ಮೂರ್ತಿ, ಕಲ್ಕುಡ ದೈವಗಳ ಕೋಲ ನೇಮೋತ್ಸವ ನಡೆಯಲಿದೆ. ತಾ. ೨೮ ರಂದು ಬೆಳಗ್ಗೆ ೩ ಗಂಟೆಗೆ ಶ್ರೀ ಕೊರಗ ತನಿಯ ದೈವದ ಕೋಲ, ಬೆಳಿಗ್ಗೆ ೬ ಗಂಟೆಯಿAದ ಧರ್ಮದೈವದ ಕೋಲ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ೯೦೦೮ ೮೩೯೭೭೯ ಸಂಖ್ಯೆಗಳನ್ನು ಸಂಪರ್ಕಿಸಬಹುದೆAದು ಆನಂದ ಪೂಜಾರಿ ತಿಳಿಸಿದ್ದಾರೆ.